ಹಿರಿಯ ವಿಮರ್ಶಕ-ಲೇಖಕ ಕೆ.ವಿ. ನಾರಾಯಣ ಅವರ ಸಮಗ್ರ ಬರೆಹಗಳ ಆರನೇ ಸಂಪುಟವಿದು. ಇದರಲ್ಲಿ ಭಾಷೆಗೆ ಸಂಬಂಧಿಸಿದ ಬರೆಹಗಳನ್ನು ಸಂಕಲಿಸಲಾಗಿದೆ. ಈ ಗ್ರಂಥದಲ್ಲಿ ಒಟ್ಟು ೪೫ ಲೇಖನಗಳಿವೆ. ’ಕನ್ನಡ ಉಳಿಯುವುದೇ’ ಎಂಬುದು ಮೊದಲ ಬರೆಹವಾದರೆ,’ಹೀಗೊಂದು ದಾಖಲೆ- ಭವಿಷ್ಯದ ಆಲೋಚನ’ ಎಂಬುದು ಕೊನೆಯ ಲೇಖನ. ನಮ್ಮ ಭಾಷೆ ನಿಜವಾಗಿಯೂ ನಮ್ಮದೇ?, ಕನ್ನಡಗಳು ನಮಗಿರುವ ಆಯ್ಕೆಗಳೇನು?, ಸಾಮಾಜಿಕ ಚಹರೆಯಾಗಿ ದಲಿತ ಭಾಷೆ, ಕನ್ನಡದ ಶುದ್ಧತೆ, ಎಫ್.ಎಂ. ವಾಹಿನಿಗಳ ಕನ್ನಡ, ನಮಗೆಷ್ಟು ಕನ್ನಡ ಬೇಕು? ಬರೆಹಗಳಿವೆ.
ಕನ್ನಡ ಮತ್ತು ತಂತ್ರಜ್ಞಾನ, ಕನ್ನಡ ಭಾಷೆಯ ಅಧ್ಯಯನಗಳು, ಕನ್ನಡ ಮತ್ತು ಸಾಹಿತ್ಯ, ಕನ್ನಡ ಲಿಪಿ ಸುಧಾರಣೆ, ಕನ್ನಡ ಮಾತು ಮತ್ತು ಬರೆಹ, ಬರವಣಿಗೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳು, ಸಮೂಹ ಮಾಧ್ಯಮಗಳಲ್ಲಿ ಕನ್ನಡ…. ಹೀಗೆ ಪಟ್ಟಿ ಬೆಳೆಯುತ್ತದೆ. ಕನ್ನಡ ಭಾಷೆ ಮತ್ತು ಅದರ ಸ್ವರೂಪ ಹಾಗೂ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಿರುವವರು ಮಾತ್ರವಲ್ಲ ಭಾಷೆಯಲ್ಲಿ ಆಸಕ್ತರಾಗಿರುವವರೆಲ್ಲ ಗಮನಿಸಬೇಕಾದ ಗ್ರಂಥವಿದು. ಕನ್ನಡದ ಸ್ಥಿತಿ ಮತ್ತು ಗತಿಯನ್ನು ಚಿತ್ರಿಸುತ್ತದೆ.
©2024 Book Brahma Private Limited.