ಡಾ. ಬಿ.ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯರು ಮತ್ತು ಅಸ್ಪೃಶ್ಯತೆಯ ಸಮಸ್ಯೆಗಳು, ಅದು ಹಿಂದೂ ಸಮಾಜಕ್ಕೆ ಹೇಗೆ ಕಳಂಕವಾಗಿದೆ ಎಂಬುದರ ಕುರಿತು ವಿವಿಧ ನೆಲೆಗಳಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಅಸ್ಪೃಶ್ಯತೆಯ ಮೂಲ, ಅಸ್ಪೃಶ್ಯ ಜನಸಂಖ್ಯೆ, ಕೊಳೆಗೇರಿ, ಅರಾಜಕತೆ, ಜಾತಿಪದ್ಧತಿ ಮತ್ತು ಅಂತಃಸಾಕ್ಷಿಯ ಕೊರತೆ, ಇದರಿಂದಾಗಿರುವ ಸಮಾಜದ ವಿಚ್ಛಿದ್ರೀಕರಣ, ಗಾಂಧಿ ಮತ್ತು ಅಸ್ಪೃಶ್ಯರ ಸಮಸ್ಯೆ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮತ್ತು ಮತಾಂತರವಾದವರ ಪರಿಸ್ಥಿತಿ ಈ ಎಲ್ಲಾ ಸಂಗತಿಗಳ ಕುರಿತ ಮಾಹಿತಿಗಳನ್ನು ಈ ಪುಸ್ತಕದಲ್ಲಿ ಒದಗಿಸಿದ್ದಾರೆ.