ಕಥಾಲೋಕ

Author : ಅರವಿಂದ ಚೊಕ್ಕಾಡಿ

Pages 284

₹ 300.00




Published by: ರೂಪಾ ಪ್ರಕಾಶನ
Address: ಬಳ್ಳಾರಿ

Synopsys

‘ಕಥಾಲೋಕ’ ಸಂಪುಟ-2 ಸುಬ್ರಾಯ ಚೊಕ್ಕಾಡಿ ಅವರ ಕಥೆ-ಕಾದಂಬರಿ ಸೇರಿದಂತಹ ಸಮಗ್ರ ಲೇಖನಗಳ ಸಂಕಲನವಾಗಿದೆ. ಈ ಕೃತಿಯನ್ನು ಅರವಿಂದ ಚೊಕ್ಕಾಡಿ ಅವರು ಸಂಪಾದಿಸಿದ್ದಾರೆ. ಇಲ್ಲಿ ಹತ್ತು ಕತೆಗಳು ಹಾಗೂ ಒಂದು ಕಾದಂಬರಿ ಸೇರಿಕೊಂಡಿದೆ. ದಕ್ಷಿಣಕನ್ನಡದ ಕಾಲದ ಜನಜೀವನದ ಕೈಪಿಡಿಯಂತಿರುವ ಕತೆಗಳು ಮತ್ತು ಕಾದಂಬರಿ ನಮ್ಮ ಓದನ್ನು ಸಾರ್ಥಕಗೊಳಿಸುತ್ತದೆ. ಕತೆಗಳಲ್ಲಿ ಕಾವ್ಯದ ಸುಳಿವೇ ಇಲ್ಲದಂತೆ ಅವರು ನವ್ಯದ ಸೋಂಕಿನ ಹೊರತಾಗಿಯೂ ಬರೆದಿರುವುದು ವಿಶೇಷ. ಕತೆ ಬರೆಯುವ ವೇಳೆಗೆ ಅವರಲ್ಲಿದ್ದ ಕವಿ ಬೇರೇಲ್ಲೋ ತಿರುಗಾಟಕ್ಕೆ ಹೋಗಿರಬೇಕು ಎಂದನಿಸುತ್ತದೆ. ಗದ್ಯದ ಮೂಲಕ ಅವರು ಹೇಳಿದ್ದು ಜನರ ಕತೆಗಳನ್ನು. ಅಲ್ಲಿ ಅಂತರಂಗದ ಶೋಧ ಕಾಣಿಸುತ್ತಿಲ್ಲ. ಆದರೆ ತಾನು ಕಂಡ ಊರು, ಜನ ಮತ್ತು ಕಾಲದ ಒಡಪನ್ನು ಅವರು ಕತೆಗಳಲ್ಲಿ ಇಟ್ಟಿದ್ದಾರೆ. ಹೀಗಾಗಿ ಕತೆಗಳು ನಮ್ಮನ್ನು ಬಹಳ ಕಾಲ ಆವರಿಸಿಕೊಳ್ಳುತ್ತವೆ.

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books