ಇಂಡಿಯನ್ ಇನ್‌ಫರ್ಮೇಷನ್ ನಲ್ಲಿ 1943 ಮಾರ್ಚ್ 1 ರಂದು ವ್ಯಕ್ತಿ ಚಿತ್ರಗಳು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ ಜೀವನ ಚಿತ್ರವನ್ನೊಳಗೊಂಡ ಲೇಖನದ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು 1942 ರಿಂದ 1946 ರವರೆಗೆ ಗವರ್ನರ್ ಜನರಲ್ ಅವರ ಕಾರ್ಯಕಾರಿ ಪರಿಷತ್ ಸದಸ್ಯರಾಗಿದ್ದಾಗ ಇವರು ಕೈಗೊಂಡ ಕಾರ್ಯಗಳನ್ನು ವಿವರಿಸುತ್ತದೆ. ಕಾರ್ಮಿಕರ ಬಗ್ಗೆ ಅದರಲ್ಲಿಯೂ ಗಣಿ ಕಾರ್ಮಿಕರ ಬಗ್ಗೆ, ಮಹಿಳಾ ಕಾರ್ಮಿಕರ ಬಗ್ಗೆ, ಕಾರ್ಮಿಕರ ಕಾನೂನು, ಕಾರ್ಖಾನೆಗಳ ಮಸೂದೆ, ಯುದ್ಧ ಕಾರ್ಯಗಳ ರಾಷ್ಟ್ರೀಯ ಸೇವಾ ಕಾರ್ಮಿಕ ನ್ಯಾಯಾಧಿಕರಣಗಳು, ದಾಮೋದರ ಕಣಿವೆ, ಒರಿಸ್ಸಾ ನದಿಗಳ ವಿವಿಧೋದ್ದೇಶ ಅಭಿವೃದ್ಧಿ ಯೋಜನೆ, ಕಾರ್ಮಿಕರ ಪರಿಹಾರ ಮಸೂದೆ, ಭಾರತೀಯ ಗಣಿಗಳ ಮಸೂದೆ, ಪುನರ್ವಸತಿ ಯೋಜನೆಗಳು, ಪರಿಶಿಷ್ಟ ಜಾತಿಗಳ ರಾಜಕೀಯ, ಶೈಕ್ಷಣಿಕ ಮತ್ತಿತರ ಕುಂದುಕೊರತೆಗಳು, ಪರಿಶಿಷ್ಟ ಜಾತಿಗೆ (ಅಸ್ಪೃಶ್ಯರಿಗೆ) ಸಂಬಂಧಿಸಿದಂತೆ ಸಂಪುಟ ನಿಯೋಗವು ಸೂಚಿಸಿದ ಭಾರತ ಸಂವಿಧಾನದಲ್ಲಿನ ಶಿಫಾರಸುಗಳ ಬಗೆಗಿನ ಟೀಕೆಗಳು, ಭಾರತದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ಪ್ರಾಂತೀಯ ಶಾಸಕಾಂಗಗಳಲ್ಲಿ ಪರಿಶಿಷ್ಟ ಜಾತಿಯವರಿಗಾಗಿ ಮೀಸಲಾಗಿರಿಸಿದ್ದ ಸ್ಥಾನಗಳಿಗೆ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಜರುಗಿದ ಚುನಾವಣೆಯ ವಿಚಾರಗಳು ಹೀಗೆ ಹಲವು ಪ್ರಮುಖ ಸಂಗತಿಗಳ ಕುರಿತ ಮಾಹಿತಿಯನ್ನು ಈ ಕೃತಿಯೂ ಒದಗಿಸುತ್ತದೆ.
©2024 Book Brahma Private Limited.