ಪತ್ರಕರ್ತೆಯಾಗಿ, ಲೇಖಕಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡ ಬಿ.ಟಿ. ಲಲಿತಾ ನಾಯಕ್ ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕಿ. ತಳಸಮುದಾಯದಿಂದ ಬಂದ ಹೆಣ್ಣುಮಗಳೊಬ್ಬರು ಏರಿದ ಎತ್ತರ ಶ್ಲಾಘನೀಯ. ಅವರ ಬರವಣಿಗೆಗಳ ವಿವಿಧ ಮಜಲುಗಳನ್ನು ಪರಿಚಯಿಸುತ್ತಿದೆ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಅವರ ಸಮಗ್ರ ಸಾಹಿತ್ಯ ಕುರಿತ ಎರಡನೇ ಸಂಪುಟ.
ಬಂಜಾರ ಹೆಜ್ಜೆಗುರುತುಗಳು, ಗ್ರಹಿಕೆ ಗೊಂಚಲು, ವ್ಯಕ್ತಿಚಿತ್ರ, ವಿಶಿಷ್ಟ ವರದಿಗಾರಿಕೆ, ಹೊಸ ಮಾಹಿತಿಗಳ ವಿಶ್ಲೇಷಣೆ ಸೇರಿದಂತೆ 40 ಬರೆಹಗಳು, ಮಕ್ಕಳ ಸಾಹಿತ್ಯ ಪ್ರಕಾರದ 20 ಕತೆಗಳನ್ನು ಸಂಪುಟ ಒಳಗೊಂಡಿದೆ.
ಬಿ.ಟಿ. ಲಲಿತಾ ನಾಯಕ್ ಜನಿಸಿದ್ದು 1945 ಏಪ್ರಿಲ್ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...
READ MORE