ಆಧುನಿಕ ಕನ್ನಡದ ಅಶ್ವಿನಿಕುಮಾರರು ಎಂದು ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಕರೆಯಲಾಗುತ್ತಿತ್ತು. ತಳುಕಿನ ವೆಂಕಣ್ಣಯ್ಯನವರು ಕುವೆಂಪು ಅವರಂತಹ ಮೇರು ಸಾಹಿತಿಗಳಿಗೆ ಗುರುಗಳಾಗಿದ್ದವರು. ವೆಂಕಣ್ಣಯ್ಯ ಅವರ ಸಾಹಿತ್ಯ ಕೃಷಿಯೂ ಗಮನಾರ್ಹ. ಆದರೆ ಅವರ ಸಾಹಿತ್ಯ ಒಟ್ಟಿಗೆ ಸಿಗುತ್ತಿರಲಿಲ್ಲ. ಅದನ್ನು ಗಮನಿಸಿದ ಹಿರಿಯ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ವೆಂಕಣ್ಣಯ್ಯನವರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿದ್ದಾರೆ.
ಗ್ರಂಥದಲ್ಲಿ ನಾಲ್ಕು ಭಾಗಗಳಿದ್ದು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ . ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಇಂದಿಗೂ ಮಹತ್ವ ಪಡೆದುಕೊಂಡಿದೆ.
ಕುವೆಂಪು ಅಂತಹವರನ್ನು ಕಟೆದ ಟಿಎಸ್‌ವಿ ಅವರ ಚಿಂತನ ಕ್ರಮ ಹೇಗಿರುತ್ತದೆ ಎಂದು ಅರಿಯಲು, ಅವರ ಬೋಧನೆಗಳ ಮೌಲ್ಯವನ್ನು ತಿಳಿಯಲು ಕೃತಿಯನ್ನು ಓದಲೇಬೇಕು.
©2024 Book Brahma Private Limited.