ಪಂಡಿತ್ ದೀನದಯಾಳ್ ಉಪಾಧ್ಯಾಯರದೇ ವಿಶಿಷ್ಟವಾದ ಏಕಾತ್ಮವಾದದ ಪ್ರತಿಪಾದನೆ, ಏಕಾತ್ಮ ಮಾನವ ದರ್ಶನ, ಹಿಂದುತ್ವ, ಧರ್ಮದ ಪರಿಕಲ್ಪನೆ, ಗ್ರಾಮೀಣಾಭಿವೃದ್ಧಿ ಬಗೆಗೆ, ತಮ್ಮವರೆಗೆ ನಡೆದು ಬಂದಿದ್ದ ವಿಜ್ಞಾನದ ಬೆಳವಣಿಗೆ, ರಾಜಕೀಯ ಸಿದ್ದಾಂತಗಳು, ಇವುಗಳ ಹಿನ್ನೆಲೆಯಲ್ಲಿ ಸ್ವಸ್ಥ ಸಮಾಜಕ್ಕೆ, ಭದ್ರವಾದ ಆರ್ಥಿಕತೆಗೆ, ಅಭಿವೃದ್ಧಶೀಲ ರಾಷ್ಟ್ರಕ್ಕೆ ಅಗತ್ಯವಾದ ವಿಚಾರಗಳು, ಚಿಂತನೆಗಳು ಅವರ ಲೇಖನಗಳಲ್ಲಿ ಕಂಡು ಬರುತ್ತದೆ. ಅವರ ಚಿಂತನೆಗಳನ್ನು ಗಾಂಧೀಜಿ, ಲೋಹಿಯಾ, ಮಾರ್ಕ್ಸ್ ಮತ್ತು ಎಂ.ಎನ್. ರಾಯ್ ಅವರ ಆರ್ಥಿಕ ಚಿಂತನೆ, ಮಾನವತಾವಾದದ ಪ್ರತಿಪಾದನೆಗಳೊಡನೆ ತುಲನಾತ್ಮಕವಾಗಿ ನೋಡಿರುವ ಲೇಖನಗಳನ್ನು ಈ ಸಂಪುಟವು ಒಳಗೊಂಡಿದೆ.