ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮಗ್ರ ಕಾವ್ಯ ಸಂಪುಟ - 2 (ತಾಯಿ ಬೇರಿನ ಕಣ್ಣು)

Author : ಎಸ್.ಜಿ. ಸಿದ್ಧರಾಮಯ್ಯ

Pages 460

₹ 385.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ನೆಲದನಿಗೆ ಕಿವಿಯಾನಿಸಿದ ಮಾತ್ರಕ್ಕೆ ಮಣ್ಣಿನ ಪಸೆಗೆ ಕೈಯಾನಿಸಿದ ಮಾತ್ರಕ್ಕೆ ದೇಸಿಪ್ರಜ್ಞೆ ದಕ್ಕುವುದಿಲ್ಲ. ಮೈಯ್ಯಾನಿಸಬೇಕು ಮನಸ್ಸು ಧ್ಯಾನಿಸಬೇಕು, ಆನುತಾನೆಂಬುದ ಕಳಕೊಂಡು ನಿಸರ್ಗತನವ ಪಡಕೊಳ್ಳಬೇಕು. ಹಾಗಾದಾಗ ಮಾತ್ರ ನೆಲದ ದನಿ ಮಾತಾಗಿ, ಮಾತು ಪದವಾಗಿ ಪದ ಕಾವ್ಯವಾಗಿ ಕಾವ್ಯ ಅನುಭವವಾಗಿ ಮನ ತುಂಬಿಕೊಳ್ಳುತ್ತದೆ. ಹೀಗೆ ನೆಲದ ತವಕ ತಲ್ಲಣಗಳನ್ನು ತಮ್ಮ ಅನುಭಾವಿಕ ನುಡಿಯಲ್ಲಿ ಒತ್ತಟ್ಟು ಮಾಡಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು ಈ ಕೃತಿಯ ಮೂಲಕ ವಿವರಿಸಿದ್ದಾರೆ.

About the Author

ಎಸ್.ಜಿ. ಸಿದ್ಧರಾಮಯ್ಯ
(19 November 1946)

ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು  ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...

READ MORE

Related Books