ಶ್ರೀ ಕೃಷ್ಣದೇವರಾಯ

Author : ಕಸ್ತೂರಿ

Pages 268

₹ 300.00




Year of Publication: 2021
Published by: ನಿರಂತರ
Address: ಆರ್‌.ಪಿ.ಸಿ ಲೇಔಟ್‌ ವಿಜಯನಗರ ಬೆಂಗಳೂರು 560040

Synopsys

ಶ್ರೀಕೃಷ್ಣದೇವರಾಯ ಕಸ್ತೂರಿ ಅವರ ಅನುವಾದಿತ ಕೃತಿಯಾಗಿದೆ. ಶ್ರೀಕೃಷ್ಣದೇವರಾಯ ಎಂದರೆ ಯಾರಿಗೆ ಅಭಿದಾನ ಇರೆದು ಆ ಕಾಲದಿಂದ ಈ ಕಾಲದವರೆಗೂ, ಭವಿಷ್ಯದಲ್ಲಿ ಸಹಾ ಕವಿಗಳ, ಕಲಾವಿದರ, ಇಷಿ ಸಂಶೋಧಕರ, ಪಡೆಗಳ ಹೃದಯಗಳಲ್ಲಿ ಆತನ ಸ್ಥಾನ ಸುಭದ್ರ ಅದಕ್ಕೆ ಕಾರಣ ಆತನ ಬಹುಮುಖಿ ವ್ಯಕ್ತಿತ್ವ. ನನಗೆ, ಇತಿಹಾಸದತ್ತ ಮಮಕಾರ ಇದ್ದರೂ ಶ್ರೀಕೃಷ್ಣದೇವರಾಯನ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರಲಿಲ್ಲ, ಆದರೆ ವಿದ್ಯಾರ್ಥಿ ದೆಸೆಯಲ್ಲೂ, ಆನಂತವ ಕೂಡಾ ಜನನ ಬಗ್ಗೆ ಓದಿಕೊಳ್ಳುತ್ತಾ ಹೋದೆನೇ ಹೊರತು, ಆತನ ಕುರಿತು ಆಳವಾದ ಅಧ್ಯಯನ ಮಾಡಲಿಲ್ಲ, ಆದರೆ 1984 ರಲ್ಲಿ ಮೊದಲ ಬಾರಿಗೆ ಹಂಪಿಯನ್ನು ನೋಡುವುದು ಸಾಧ್ಯವಾಯಿತು. 2 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಆ ಪ್ರಾತವನ್ನೆಲ್ಲಾ ಹರ್ಯವೇಕ್ಷಿಸಿದನು. ಮನಸ್ಸಿನಲ್ಲಿ ಯಾವದೋ ತಿಳಿಯದ ಭಾವನೆ! ಹಂಪಿ ಹಿನ್ನೆಲೆ ಆಧಾರವಾಗಿ ಒಂದು ರೇಖೆ ನಾಟಕ ಬರೆದನು, ಆ ನಾಟಕ ಕಡಪಾ ಆಕಾಶವಾಣಿ ಕೇಂದ್ರದಿಂದ ಪ್ರಸಾರ ಆಯುಕ್ತಿ ಈ ನಾಟಕದಲ್ಲಿ ಸಂದರ್ಭಕ್ಕೆ ತಕ್ಕಂತೆ, ಅಲ್ಲಿಯ ಕಟ್ಟಡಗಳ ಬಗ್ಗೆ ಶಿಲ್ಪ ನಿರ್ಮಾಣದ ಬಗ್ಗೆ ನಾಟಕದಲ್ಲಿನ ಪಾತ್ರಗಳ ಮೂಲಕ ಹೇಳಿವೆ. 1995, 2013ರಲ್ಲಿ ಸಹ ಹಂಪಿಯನ್ನು ದರ್ಶಿಸಿದ್ದಾಯಿತು. ಆದರೆ ಕೃಷ್ಣದೇವರಾಯನ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಬೇಕೆಂಬ ಇಚ್ಚೆ ಉಂಟಾಗಲಿಲ್ಲ. ಎನ್ನುತ್ತಾರೆ ಲೇಖಕಿ .

About the Author

ಕಸ್ತೂರಿ

ಕಸ್ತೂರಿಯವರ ಮೂಲ ಹೆಸರು ಚಂದ್ರಜ್ಯೋತಿ, ತುಮಕೂರಿನಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಿ.ಎ. ಬಿಎಡ್ ಪದವಿದರರಾದ ಇವರು ಅನುವಾದ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಸಂಪಾದಿಸಿದ್ದಾರೆ. ತೆಲುಗಿನ ವಿವಿಧ ಸಾಹಿತಿಗಳ 80ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜೊತೆಗೆ ತಾವೇ ಸ್ವತಃ 10 ಕಾದಂಬರಿಗಳು, 4 ಮಕ್ಕಳ ಕಥೆಗಳು, 3 ಕವನ ಸಂಕಲನಗಳನ್ನು ರಚಿಸಿದ್ದಾರೆ. ...

READ MORE

Related Books