‘ನಾಡಿ ಮಿಡಿತ’ ಸಮಗ್ರ ಕಾದಂಬರಿಗಳ ಸಂಪುಟವಾಗಿದ್ದು, ಈ ಕೃತಿಯು ನಾ. ಡಿಸೋಜ ಅವರ ಸಂಪುಟ-3 ಭಾಗವಾಗಿದೆ. ಇಲ್ಲಿ ಕಾಡಿನ ಬೆಂಕಿ, ರಾಗ ವಿರಾಗ, ಸೇತುವೆ, ಪ್ರೀತಿ ಎಂಚ ಚುಂಬಕ, ಕುಂಜಾಲು ಕಣಿವೆಯ ಕೆಂಪು ಹೂವು, ಒಂದು ಜಲಪಾತದ ಸುತ್ತ ಸೇರಿದಂತೆ ಆರು ಕಾದಂಬರಿಗಳನ್ನು ಕಾಣಬಹುದು. ‘ಕಾಡಿನ ಬೆಂಕಿ’ ಚಲನಚಿತ್ರವಾಗಿ ಪ್ರಶಸ್ತಿಗಳನ್ನ ಗಳಿಸುವುದರ ಜೊತೆಗೆ ಓದುಗರು ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಕಾದಂಬರಿಯ ವಿಶೇಷ ಕಾದಂಬರಿಯೆಂದರೆ ‘ಕುಂಜಾಲು’. ಉರುಳಿ ಹೋಗುವ ಕಾಲ ಏನೆಲ್ಲವನ್ನ ಬದಲಾಯಿಸಿ ಬಿಡುತ್ತದೆ ಎಂಬುದನ್ನ ಓದುಗರಿಗೆ ತಿಳಿಸಿ ಕೊಡುವ ಕೃತಿ. ಇದು ‘ಕೆಂಜಿಯ ಕುಸುಮಂ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಗೊಂಡಿತು. ಕೆಲವರು ಇದನ್ನ ನಾಟಕ ರೂಪದಲ್ಲಿಯೂ ಹೊರತಂದರು. ‘ ಒಂದು ಜಲಪಾತದ ಸುತ್ತ’ ಕಾದಂಬರಿಯಲ್ಲಿ ಜೋಗ ಜಲಪಾತದ ಕೆಲ ಜಲಪಾತಗಳು ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಬಂದಿರುವುದೊಂದು ವಿಶೇಷ. ಇನ್ನು ‘ರಾಗ-ವಿರಾಗ’ ಕಾದಂಬರಿಯು ಓರ್ವ ವಿದೇಶಿ ಪ್ರವಾಸಿ ತನ್ನ ಪ್ರವಾಸ ಕಥನದಲ್ಲಿ ಕತೆ ಹೇಳುವುದನ್ನು ತಿಳಿಸುತ್ತದೆ.
©2024 Book Brahma Private Limited.