ಬಂಡಾಯ ಚಳವಳಿಯ ಪ್ರಮುಖ ಲೇಖಕಿ ಬಿ.ಟಿ. ಲಲಿತಾ ನಾಯಕ್. ಸ್ತ್ರೀಪರ ಧ್ವನಿ ಅವರ ಬರವಣಿಗೆಯ ಮತ್ತೊಂದು ಸತ್ವ. ಲಲಿತಾ ಅವರ 'ಬುದ್ವಂತರು', 'ಪ್ರೇಮ ವಿವಾಹ', 'ನಂಬಿ ಕೆಟ್ಟೆನಲ್ಲೊ', 'ತಾಗುವ ಮುನ್ನ ಬಾಗುವ ತಲೆ ಲೇಸು' ಮುಂತಾದ ಹನ್ನೊಂದು ಬಾನುಲಿ ನಾಟಕಗಳನ್ನು, 'ನೆಲೆ ಬೆಲೆ' ಹಾಗೂ 'ಗತಿ' ಕಾದಂಬರಿಗಳನ್ನು ಹಾಗೂ ‘ಹಬ್ಬ ಮತ್ತು ಬಲಿ’ಯಿಂದ ‘ಮೂರು ಕಾಸಿನ ಹೆಣ್ಣು’ ವರೆಗಿನ ಹದಿನೇಳು ಕತೆಗಳನ್ನು ಹೊಂದಿರುವ ಸಂಪುಟ ಇದು.
ಕನ್ನಡ ಪುಸ್ತಕ ಪ್ರಾಧಿಕಾರ ಲಲಿತಾ ನಾಯಕ್ ಅವರ ಬರಹಗಳ ಕುರಿತು ಪ್ರಕಟಿಸಿರುವ ಎರಡು ಸಂಪುಟಗಳಲ್ಲಿ ಇದು ಮೊದಲನೆಯದು.
ಬಿ.ಟಿ. ಲಲಿತಾ ನಾಯಕ್ ಜನಿಸಿದ್ದು 1945 ಏಪ್ರಿಲ್ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...
READ MORE