ಉತ್ತಮ ಸಾಹಿತಿ, ಅಪ್ರತಿಮ ದೇಶಭಕ್ತ, ಆದರ್ಶ ಚಿಂತಕ, ಸಮಾಜ ಸುಧಾರಕ, ಪ್ರಬುದ್ಧ ತತ್ವಜ್ಞಾನಿ, ಮೇಧಾವಿ ಅರ್ಥಶಾಸ್ತ್ರಜ್ಞ, ರಾಷ್ಟ್ರ ನಿರ್ಮಾಪಕ ಈ ಎಲ್ಲಾ ಗುಣಗಳನ್ನೊಳಗೊಂಡ ಮಹಾನ್ ವ್ಯಕ್ತಿಯೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು. ಜನ ಸಂಘದಂಥ ರಾಷ್ಟ್ರೀಯ ರಾಜಕೀಯ ಪಕ್ಷದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ರಾಷ್ಟ್ರ ಕಾರ್ಯವು ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು. ಮನುಷ್ಯ ತನಗಾಗಿ ಬಾಳದೆ ದೇಶಕ್ಕಾಗಿ ಬಾಳಬೇಕು ಎಂಬ ಆಶಯಗಳೊಂದಿಗೆ ಪಂಡಿತ್ ದೀನ್ ದಯಾಳರು ಜನಸಂಘದ ಮೂಲಕ ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಹಲವು ಹೋರಾಟ ನಡೆಸಿದರು. ಹಾಗೆಯೇ ಯಾವುದರಿಂದ ಮತ್ತು ಯಾರಿಂದ ದೇಶಕ್ಕೆ ಅನಾನುಕೂಲ ಎಂಬುದರ ಬಗ್ಗೆ ಮತ್ತು ರಾಜಕೀಯದ ನೈತಿಕತೆ, ಚುನಾವಣೆ, ರಾಷ್ಟ್ರಚಿಂತನೆಗಳ ಬಗ್ಗೆ, ಜೀವನದ ಧ್ಯೇಯ, ಧರ್ಮ, ಸಮಸ್ಕೃತಿ, ವ್ಯಕ್ತಿ ಮತ್ತು ಸಮಾಜಗಳ ಬಗ್ಗೆ ವಿವರವಾಗಿ ಈ ಸಂಪುಟದಲ್ಲಿ ವಿವರಿಸಲಾಗಿದೆ.