ಪಂಜೆ ಮಂಗೇಶರಾಯರು ಕನ್ನಡ ನವೊದಯದ ಮಹಾಬೆಳಗು ಎನ್ನುತ್ತಾರೆ. ಸುತ್ತಿನ ತುಳು, ಕೊಂಕಣಿ, ಕೊಡವ ಭಾಷಿಕ ಸಂಸ್ಕೃತಿಯನ್ನು ಕನ್ನಡದೊಂದಿಗೆ ಒಂದಾಗಿಸಲು ಹೆಣಗಿದವರು ಪಂಜೆ ಮಂಗೇಶರಾಯರು ಮಕ್ಕಳಿಗಾಗಿ ಹಾಡು, ಕತೆ ಬರೆದವರು. ಶಾಸ್ತ್ರ ಪಾಂಡಿತ್ಯ ಮೆರೆದರು. ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ ಮೂಲ ವ್ಯಾಕರಣ, ಶಬ್ದಮಣಿದರ್ಪಣ - ಕೇಶಿರಾಜಕೃತ ವ್ಯಾಕರಣದ ಪರಿಷ್ಕೃತ ಸಂಪಾದನೆ ಕೃತಿ ನೀಡಿದ್ದು, ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡಿದವರು. .ಆಯ್ದ ಕವನಗಳ ಸಂಕಲನಗಳನ್ನು - ‘ಕನ್ನಡ ಮೊದಲನೆಯ ಪದ್ಯಪುಸ್ತಕ‘ (1912), ‘ಕನ್ನಡ ಎರಡನೆಯ ಪದ್ಯ ಪುಸ್ತಕ‘ (1919) ಹಾಗೂ ‘ಕನ್ನಡ ಮೂರನೆಯ ಪದ್ಯ ಪುಸ್ತಕ‘ (1920) ಹೀಗೆ ಸಂಪಾದಿಸಿ ಪಠ್ಯ ಪುಸ್ತಕಗಳ ರೂಪದಲ್ಲಿ ಕೃತಿ ರಚಿಸಿದವರು. ಇಂತಹ ಮಹನೀಯರ ಸಾಹಿತ್ಯದ ಸಮಗ್ರ ರೂಪ ಈ ಕೃತಿ.
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು. ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ...
READ MORE