ಅನ್ಯಾಯ ಕಂಡಾಗಲೆಲ್ಲಾ ಕರಿಕೋಟು ಧರಿಸಿ ಸೊಲ್ಲೆತ್ತುವ, ರಾಜಕಾರಣದೊಳಗಿದ್ದೂ ಅದರ ಕೆಸರನ್ನು ಅಂಟಿಸಿಕೊಳ್ಳದ ಅಪರೂಪದ ವ್ಯಕ್ತಿತ್ವ ಎ. ಕೆ. ಸುಬ್ಬಯ್ಯ ಅವರದ್ದು. ನಾಡಿನ ಸಾಕ್ಷಿಪ್ರಜ್ಞೆ ಎನಿಸಿದ ಅವರ ಮಾತುಗಳಿಗೆ ತೂಕವಿದೆ. ಹುಟ್ಟು ಬಂಡಾಯ ಸ್ವಭಾವದವರಾದ ಅವರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವ ಛಾತಿ ಹೊಂದಿದವರು. ಆ ಕಾರಣಕ್ಕೆ ಆರೆಸ್ಸೆಸ್ ನಿಂದ ಹೊರಬಂದು ಅದರ ವಿರುದ್ಧ ಹೋರಾಟ ಮಾಡಿದರು.
ಸುಬ್ಬಯ್ಯನವರ ಸಮಗ್ರ ಬರಹಗಳ ಸಂಪುಟ ಮಾಲೆಯಡಿ ಲಡಾಯಿ ಪ್ರಕಾಶನ ಹೊರತಂದಿರುವ ಕೃತಿ 'ದೇವರು ಮತ್ತು ಧರ್ಮ’. ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಕೃತಿ ಪ್ರಶ್ನಿಸುತ್ತದೆ. ಒಟ್ಟು ಹನ್ನೊಂದು ಲೇಖನಗಳಿರುವ ಕೃತಿ ದೇವರ ಹೆಸರಿನಲ್ಲಿ ನಡೆಸುತ್ತಿರುವ ರಾಜಕಾರಣವನ್ನು ನಖಶಿಖಾಂತ ವಿಮರ್ಶಿಸಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರುವ ಅನ್ಯಾಯ, ನದಿಗಳನ್ನು ಕಾಡುತ್ತಿರುವ ಧಾರ್ಮಿಕ ರಾಜಕಾರಣ, ಮೂಢನಂಬಿಕೆಗೆ ಜೋತುಬಿದ್ದ ಸರ್ಕಾರಗಳು, ಪುರೋಹಿತಶಾಹಿ ತಂದೊಡ್ಡುತ್ತಿರುವ ಬಿಕ್ಕಟ್ಟುಗಳನ್ನು ಕೃತಿಕಾರರು ಚರ್ಚಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಎ.ಕೆ. ಸುಬ್ಬಯ್ಯ ಕೊಡಗು ಜಿಲ್ಲೆಯವರು. ತಮ್ಮ ಪ್ರಖರವಾದ ಮಾತುಗಳಿಂದ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸುಬ್ಬಯ್ಯ ಅವರು ಸದಾ ಆಡಳಿತ ಪಕ್ಷದ ವಿರೋಧಿಯಾಗಿಯೇ ಇದ್ದವರು. ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರುವ ಸುಬ್ಬಯ್ಯ ಅವರು ಸದ್ಯ ಸೌಹಾರ್ದ-ಸಹಬಾಳ್ವೆಯ ಪರವಾಗಿದ್ದಾರೆ. ಸುಬ್ಬಯ್ಯ ಅವರು ಆರ್.ಎಸ್.ಎಸ್. ಅಂತರಂಗ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...
READ MORE