‘ನಾಡಿ ಮಿಡಿತ’ ಸಮಗ್ರ ಕಾದಂಬರಿಗಳ ಸಂಪುಟವಾಗಿದ್ದು, ಈ ಕೃತಿಯು ನಾ. ಡಿಸೋಜ ಅವರ ಸಂಪುಟ-4 ಭಾಗವಾಗಿದೆ. ಇಲ್ಲಿ ಶಿವನ ಡಂಗುರ, ವಿಷಾನಿಲ, ಶೃಂಗೇರಿಯಲ್ಲಿ ಶಾಂತಿ, ಕಡಲು ಕಾಯುವುದಿಲ್ಲ, ನೀರು, ತಿರುವು ಸೇರಿದಂತೆ ಆರು ಕಾದಂಬರಿಗಳಿವೆ. ಹಸಲರ ಜನಾಂಗದ ಕುರಿತ ಕತೆಯನ್ನು ಇಲ್ಲಿ ಕಾಣಬಹುದು. ಮಲೆನಾಡಿನ ಅಡಕೆ ತೋಟಗಳಲ್ಲಿ ಜೀತದಾಳುಗಳಾಗಿ ದುಡಿಯುವ ವರ್ಗದವರು ವಿಚಾರವನ್ನು ಈ ಕಾದಂಬರಿಯ ವಿಚಾರ ವಸ್ತುವಾಗಿ ಬಳಸಲಾಗಿದೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE