ಈಗಾಗಲೇ ಕನ್ನಡದಲ್ಲಿ ಡಾ. ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನೊಳಗೊಂಡ ಸುಮಾರು 20,000 ಪುಟಗಳನ್ನೊಳಗೊಂಡ ಸಂಪುಟಗಳು ದೊರೆಯುತ್ತವೆ. ಆದರೆ ಅವರ ಚಿಂತನೆಗಳನ್ನು ಅರಿತುಕೊಳ್ಳಲು ಈ ಎಲ್ಲಾ ಬರಹಗಳನ್ನು ಓದುವುದು ಕಷ್ಟಸಾಧ್ಯ. ಹಾಗಾಗಿ ಅವರ ಚಿಂತನೆಗಳ ಸಾರವನ್ನು ತಿಳಿಯಲು ಅನುಕೂಲವಾಗುವ ಕೆಲವು ಮುಖ್ಯ ಬರಹಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಅಂಬೇಡ್ಕರ್ ಅವರು ಜಾತಿಯ ನಿರ್ಮೂಲನೆ, ಅಸ್ಪೄಶ್ಯತೆ ಮತ್ತು ಅದರ ಮೂಲ, ಶೂದ್ರರು, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಗಾಂಧಿ, ರಾನಡೆ ಮತ್ತು ಜಿನ್ನಾ, ಬುದ್ಧನ ಉಪದೇಶಗಳು, ಸಂವಿಧಾನದ ಕರಡಿನ ವಾಚನ ಹಾಗೂ ಅವರು ಹಿಂದೂ ಧರ್ಮದಿಂದ ಬೌದ್ಧಧರ್ಮಕ್ಕೆ ಮತಾಂತರವಾದ ಬಗೆ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ವಿವರಣೆಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...
READ MORE