ಖ್ಯಾತ ಕಾದಂಬರಿಕಾರ, ಕಥೆಗಾರ ಡಾ. ಶಾಂತಿನಾಥ ದೇಸಾಯಿ ಅವರ ಸಮಗ್ರ ಸಾಹಿತ್ಯ ಅಧ್ಯಯನ ಕುರಿತು ವಿಮರ್ಶಕ ಡಾ. ಟಿ..ಪಿ. ಅಶೋಕ ಅವರು ರಚಿಸಿದ ಕೃತಿ-ದೇಸಾಯಿ ಕಥನ. ದೇಸಾಯಿ ಅವರ ಸಾಹಿತ್ಯವು (1927-1998) ಕನ್ನಡ ಸಾಹಿತ್ಯದಲ್ಲಿ ನವ್ಯ ಸಂವೇದನೆಯನ್ನು ಉಂಟು ಮಾಡಿದೆ. ಸಣ್ಣಕಥೆ, ಕಾದಂಬರಿ ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ಪ್ರಮುಖರು. ಸಣ್ಣಕತೆ, ಕಾಧಂಬರಿಗಳಲ್ಲಿ ನವ್ಯ ಪ್ರಜ್ಞೆಯನ್ನು ತಂದ ಮೊದಲಿಗರು. ನವ್ಯ ಚಳವಳಿಯ ಪ್ರಮುಖ ಪ್ರತಿಪಾದಕರು ಹಾಗೂ ಸಮರ್ಥಕರೂ ಆಗಿದ್ದರು. ನವ್ಯ ಕೃತಿಗಳನ್ನು ನಿಷ್ಠುರವಾಗಿ ವಿಮರ್ಶೆಗೆ ಒಳಪಡಿಸಿ, ಅವುಗಳ ಹೊಸತನವನ್ನು ಅನಾವರಣಗೊಳಿಸಿ, ಇತಿಮಿತಿಗಳನ್ನು ತೋರಿಸಿ, ಯಾವತ್ತೂ ವಸ್ತುನಿಷ್ಠತೆಯನ್ನು ಉಳಿಸಿಕೊಂಡಿದ್ದವರು. ಹೊಸ ಪೀಳಿಗೆಯ ತರುಣ-ತರುಣಿಯರಲ್ಲಿಯ ಗೊಂದಲಗಳು, ಅಭಿಪ್ಸೆಗಳು, ಆಶೋತ್ತರಗಳು ಲವಲವಿಕೆಯಿಂದ ನಿರೂಪಿಸಿದ್ದರು. ಸ್ವಾತಂತ್ಯ್ರೋತ್ತರ ಭಾರತದ ಬದಲಾದ ಆಶೋತ್ತರಗಳು, ಗುರಿಗಳು, ಆದರ್ಶಗಳು ಇವುಗಳನ್ನು ಸೂಕ್ಷ್ಮವಾಗಿ ತೆರೆದು ತೋರಿದ್ದರು. ಅವರ ಸಾಮಾಜಿಕ-ರಾಜಕೀಯ ವಿಚಾರಗಳು ಕಥನ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾಗಿದ್ದವು. ದೇಸಾಯಿ ಅವರ ಸಮಗ್ರ ಸಾಹಿತ್ಯ ವನ್ನು ವಿಶ್ಲೇಷಣಾತ್ಮಕವಾಗಿ, ವಿಮರ್ಶಾತ್ಮಕವಾಗಿ ಚರ್ಚಿಸುವ ಪ್ರಸ್ತುತ ಕೃತಿ ದೇಸಾಯಿ ಕಥನ. ಅವರ ಕೃತಿಗಳ ಕುರಿತ ಚರ್ಚೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿದೆ. ಮತ್ತು, ಹೊಸ ಆಯಾಮಗಳನ್ನು ಕೂಡಿಸಿದೆ. ಕನ್ನಡದ ಪ್ರಮುಖ ಲೇಖಕರೊಬ್ಬರ ಕುರಿತು ತಲಸ್ಪರ್ಶಿ ಅಧ್ಯಯನ ಇದು ಎಂದು ಲೇಖಕ ಹಾಗೂ ವಿಮರ್ಶಕ ಡಾ. ಟಿ.ಪಿ. ಅಶೋಕ ಅವರು ಅಭಿಪ್ರಾಯಪಟ್ಟಿದ್ದಾರೆ.
‘ದೇಸಾಯಿ ಕಥನ’ ಕೃತಿಯ ವಿಮರ್ಶೆ
ಸಮಗ್ರ ಮತ್ತು ತುಲನಾತ್ಮಕ ನೋಟ
ಟಿ.ಪಿ. ಆಶೋಕರವರ 'ಕಥನ' ಸರಣಿಯ 'ದೇಸಾಯಿ ಕಥನ, ದೇಸಾಯಿಯವರ ಸಾಹಿತ್ಯಕ್ಕೆ ಪ್ರವೇಶಿಕೆಯನ್ನು ನೀಡಿ, ಅವರ ಬರಹಗಳ ವಿನ್ಯಾಸಗಳನ್ನು ಹಾಗೂ ಕನ್ನಡ ಸಾಹಿತ್ಯದ ಇತರ ಕೃತಿಗಳ ಜೊತೆಗೆ ದೇಸಾಯಿ ಸಾಹಿತ್ಯ ಸಾಧಿಸುವ ಸಾತತ್ವವನ್ನು ತೋರಿಸುವ ಪ್ರಯತ್ನವನ್ನು ಮಾಡುತ್ತದೆ.
ದೇಸಾಯಿಯವರ ಸಣ್ಣಕತೆಗಳು ನವೋದಯ ಪ್ರಜ್ಞೆಯಿಂದ ನವ್ಯ ಪ್ರಶ್ನೆಗೆ ಬದಲಾದ ಮನಸ್ಥಿತಿ ಹಾಗೂ ಅದರ ಹಿಂದಿನ ಚಾರಿತ್ರಿಕ ಪ್ರೇರಣೆಗಳನ್ನು ದಾಖಲಿಸುತ್ತವೆ ಅನ್ನುವುದನ್ನು ಅನೇಕ ಉದಾಹರಣೆಗಳ ಮೂಲಕ ಆಶೋಕರವರು ತೋರಿಸುತ್ತಾರೆ. ಮಕ್ಕಳ ಪ್ರಜೆಯ ಮೂಲಕ ಬದುಕನ್ನು ಕಾಣಿಸುವ ಕನ್ನಡ ನನ್ನ ಕತೆ, ಕಾದಂಬರಿಗಳ ಸರಮಾಲೆಯ ಮೂಲ ಚಂದೂ' ಕತೆಯಲ್ಲಿದೆ ಮತ್ತು ಸ್ಥಿತಿಜ' ಕತೆಯ ಆಶಯಗಳು ವೈದೇಹಿ, ವೀಣಾ ಶಾಂತೇಶ್ವರ, ಅವರ ಕತೆಗಳಲ್ಲಿ ಬೆಳಸಲ್ಪಟ್ಟಿವೆ ಅನ್ನುತ್ತಾರೆ. ಕತೆಯೊಳಗೆ ಕಥಾಮಿಮಾಂಸೆಯನ್ನೂ ಮಾಡುವುದು. ವ್ಯಕ್ತಿಯ ಜೀವನದ ಸಾರ್ಥಕತೆಯ ಹುಡುಕಾಟ, ನೀತಿ-ಅನೀತಿಗಳ ಬಗೆಗೆ ಸರಳವಲ್ಲದ ಜೀವನದೃಷ್ಟಿ, ಇವು ದೇಸಾಯಿ ಕಥಾಸಾಹಿತ್ಯದ ವಿನ್ಯಾಸ ಎಂದು ತೆಯಿಂದ ಗಮನಿಸುತ್ತಾರೆ.
ದೇಸಾಯಿಯವರ ಕತೆಗಳು 'ಮಧ್ಯಮ ವರ್ಗದ ಲೈಂಗಿಕ ಜೀವನದ ಮೇಲಿನ ಭಾಗ್ಯ' ಅನ್ನುವ ಆಶೋಕ, ದೇಸಾಯಿ ಅವರ ಕತೆಗಳ ಪ್ರಪಂಚವೇ ತುಂಬಾ ಸೀಮಿತವಾಗಿದ್ದು ಅನ್ನುವುದನ್ನೂ ಗಮನಿಸುತ್ತಾರೆ. ಕನ್ನಡಕ್ಕೆ ಯುತ್ತದೆ. ಅಗ್ರವಾದ ದೇಸಾಯಿಯವರ ಕಾದಂಬರಿ ಲೋಕದ 'ಭೂತಕಾಲದ ಭೂತದಿಂದ ಒಮ್ಮೆ ಮುಕ್ತನಾಗುವ ಹಂಬಲದಿಂದ 'ಭೂತಕಾಲದ ಅರಿವು ಇರಲೇಬೇಕು' ಅನ್ನುವವರೆಗಿನ ಪಯಣವನ್ನು ಆಶೋಕರವರು ತೋರಿಸಿಕೊಟ್ಟಿದ್ದಾರೆ. ಬರೆಯುವುದರ ಮೂಲಕವೇ ಹಳೆಯುತ್ತ ಸನ್ನತೆ ಪಡೆಯುವ ಪ್ರಯತ್ನ, ಸ್ವಗತ, ಆತಭರ್ತನೆ, ತಮೋಕೆ, ಇವು ದೇಸಾಯಿಯವರಿಂದ ಪ್ರಾರಂಭವಾಗಿ ಕನ್ನಡದ ನವ್ಯ ಕತೆ ಕಾದಂಬರಿಗಳ ವಿನ್ಯಾಸವನ್ನು ರೂಪಿಸಿವೆ ಅನ್ನುತ್ತಾರೆ. ಈ ಸಂದರ್ಭದಲ್ಲಿ ಆಶೋಕರವರು ಹೇಳುವ 'ಕಾಲಾನುಕ್ರಮಣಿಕೆಯ ಜಾಗವನ್ನು ತಣ್ಣಗಿನ ಪ್ರಜಾಪ್ರವಾಹ ಆಕ್ರಮಿಸಿಕೊಳ್ಳುತ್ತದೆ' ಅನ್ನುವುದು ಸ್ವಲ್ಪ ಅನುಮಾನಾಸದ, ದೇಸಾದಿಯವರ ಟಿಕೆಗಳು ಕಾದ೦ಬರಿಗಳಲ್ಲಿ ಕೆಲವೊಮ್ಮೆ ಪ್ರಜಾಪ್ರವಾಹದ ನಿರೂಪಣೆ ಇದ್ದರೂ, ಕಾಲಾನುಕ್ರಮಣಿಕೆಯನ್ನು ಬಿಟ್ಟಿರುವುದು ಬಹಳ ಕಡಿಮೆ ಅನ್ನಬಹುದು, ಅವರ ಕಾದ೦ಬರಿಗಳ ಎರಡನೇ ಘಟ್ಟದಲ್ಲಿ ಇತಿಹಾಸ, ಸಮಾಜ ಪ್ರವೇಶ ಪಡೆದರೂ ಕೇಂದ್ರ ಶವನ್ನು ಪಾತ್ರಗಳ ಆತ್ಮವಿಮರ್ಶೆಯೇ ಅಲ್ಲೂ ಮುಖ್ಯವಾಗಿದೆ. ಹಾಗಾಗೇ 'ಓಂ ಣಮೋ' ಜೈನಧರ್ಮದ ಕೈಪಿಡಿಯಾಗುವ ಧಾರ್ಮಿಕ ಕಾದಂಬರಿಯಲ್ಲ ಅನ್ನುತ್ತಾರೆ. ಎರಡನೇ ಹಂತದ ಕಾದಂಬರಿಗಳಲ್ಲಿ ವ್ಯಕ್ತಿ ಪರಿಧಿಯನ್ನು ಮೀರುವ ಪ್ರಯತ್ನಗಳಿವೆ ಅನ್ನುವಾಗ ಕುತ್ತವೆ. ಇದನ್ನು ಲಂಕೇಶ್, ತೇಜಸ್ವಿಯವರ ಬರವಣಿಗೆಗಳಲ್ಲಾದ ಬದಲಾವಣೆಗಳಿಗೆ ಹೋಲಿಸುವುದು ಸ್ವಲ್ಪ ಉತ್ತೇಕ್ಷೆಯಾಯಿತು ಅನಿಸುತ್ತದೆ.
ದೇಸಾಯಿಯವರು ಇಂಗ್ಲಿಷ್ ಅಧ್ಯಾಪಕರಾಗಿದ್ದಾಗ ಚಾಲ್ತಿಯಲ್ಲಿದ್ದ 'ಮಾಡರ್ನಿಸಮ್', ಶೈಲಿಶಾಸ್ತ್ರ, ಐ.ಎ. ರಿಚರ್ ಬಗ್ಗೆ ಹಾಗೂ ಕನ್ನಡದ ನವ್ಯ ಸಾಹಿತ್ಯದ ವೇಶದ ಬಗ್ಗೆ ಸಹಜವಾಗಿ ವಿಮರ್ಶೆ ಬರೆದಿದ್ದಾರೆ. ಕನ್ನಡದ ಬಹಳಷ್ಟು ನವ್ಯ ಕೃತಿಗಳಿಗೆ ಅವು ಗಳು, ಪ್ರಕಟವಾದ ಕೂಡಲೇ, ಕೆಲವೊಮ್ಮೆ ಮೊದಲಿಗರಾಗಿ ಪ್ರತಿಕ್ರಿಯಿಸಿ, ಕನ್ನಡ ನನ್ನ ಸಾಹಿತ್ಯವನ್ನು ಹನಕ್ಕೆ ನಿರೂಪಿಸಿದವರೂ ಆಗಿದ್ದಾರೆ. ಅವರ ಕನ್ನಡ ಕಾದಂಬರಿ ನಡೆದು ಬಂದ ರೀತಿ ಮತ್ತೆ ಮಹತ್ವದ ಕೃತಿಯಾಗಿದೆ ಎಂದು ಆಶೋಕರವರು ತೋರಿಸಿಕೊಡುತ್ತಾರೆ. ದೇಸಾಯಿಯವರ ವಿಮರ್ಶೆಯ ಮಿತಿ ಅಂದರೆ ಅವರು ಕನ್ನಡ ಸಾಹಿತ್ಯದ ಸಂದರ್ಭವನ್ನು ಇಡಿಯಾಗಿ -ಗಿ ಗ್ರಹಿಸಲಿಲ್ಲ ಹಾಗೂ ಕನ್ನಡ ಕಾದಂಬರಿ ಪರಂಪರೆಗೆ ಸಾತತ್ವ ಇದೆಯೇ ಅನ್ನುವ ಪ್ರಶ್ನೆಯನ್ನು ದೇಸಾಯಿಯವರು ಎತ್ತಿಕೊಳ್ಳುವುದಿಲ್ಲ ಎಂದು ಆಶೋಕರವರು ಗುರುತಿಸುತ್ತಾರೆ.
ಅಶೋಕರವರ ಹೆಗ್ಗಳಿಕೆಯೆಂದರೆ ಅವರು ದೇಸಾಯಿಯವರ ಬಗ್ಗೆ ತನೆ ಮಾತಾಡುವಾಗಲೇ ಇಡೀ ಕನ್ನಡ ಕಥನ ಪರಂಪರೆಯ ಬಗ್ಗೆ ಹೇಳುವುದು. 'ಬೇಸರ' ಕತೆಯನ್ನು ವೈದೇಹಿಯವರ 'ಗೂಡಿನೊಳಗೆ ಒಂದು ಹಕ್ಕಿ'ಯ ಜೊತೆ, 'ಇದೂ ಒಂದು ೨. ರೀತಿ'ಯನ್ನು ಶ್ರೀಕಾಂತರ 'ಭೂಮಿ ಕಂಪಿಸಲಿಲ್ಲ' ಜೊತೆ (ದೇಸಾಯಿ ವಿಮರ್ಶೆಯನ್ನು ಗಿರಡ್ಡಿಯವರ ವಿಮರ್ಶೆಯ ಜೊತೆ ಹೋಲಿಸಿ ದೇಸಾಯಿಯವರ ಮಿತಿಯನ್ನು - ತೋರಿಸಿರುವುದು) ಇವುಗಳನ್ನು ಗಮನಿಸಬಹುದು. ಹಾಗೆಯೇ ದೇಸಾಯಿ ಸಾಹಿತ್ಯದ, ವಿಮರ್ಶೆಯ ಮಿತಿಗಳನ್ನು ಹೇಳುವಾಗ ಕಂಡುಬರುವ ವಿಮರ್ಶೆಯ ವಿನಯ ಮತ್ತು ಸಂಯಮ ಗಮನಾರ್ಹವಾದದ್ದು. ಕೆಲವೊಮ್ಮೆ ಈ ಸಂಯಮ ಸ್ಪಷ್ಟವಾದ ಅಭಿಪ್ರಾಯ ಹೇಳುವುದಕ್ಕೆ ಅಡ್ಡಿ ಮಾಡಿದೆಯೇನೋ ಅನಿಸುವುದುಂಟು.
©2024 Book Brahma Private Limited.