ಅಭಿನವ ಪ್ರಕಾಶನದ ಶಂಕರ ಮೊಕಾಶಿ ಪುಣೇಕರ ಸಮಸ್ತ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ’ವಸ್ತು ವಿನ್ಯಾಸ’.
ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಓದು ಎಂಬ ಘೋಷದಡಿ ಪ್ರಕಟಿಸಿದ ಈ ಕೃತಿ ಶಂಕರ ಮೊಕಾಶಿ ಪುಣೇಕರರ ಸಮಸ್ತ ಸಾಹಿತ್ಯದ ವಸ್ತುವಿನ್ಯಾಸಗಳ ಬಗ್ಗೆ ವಿವರಿಸುತ್ತದೆ. ಇಂಗ್ಲಿಷ್ ನಲ್ಲಿ ಇಪ್ಪತ್ತು, ಕನ್ನಡದಲ್ಲಿ ಹನ್ನೊಂದು ಕೃತಿಗಳನ್ನು ರಚಿಸಿರುವ ಮೊಕಾಶಿಯವರು, ಸೃಷ್ಟಿಶೀಲ ಸಾಹಿತ್ಯ, ಸಂಶೋಧನೆ, ವಿಮರ್ಶೆ ಈ ಮೂರೂ ಕ್ಷೇತ್ರಗಳಲ್ಲೂ ನೀಡಿರುವ ಕೊಡುಗೆ ಅಪರೂಪದ್ದು. ಮೊಕಾಶಿಯವರ ಬರಹದ ವಿಶೇಷತೆಯೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಅವರಿಟ್ಟ ಅಚಲ ಶ್ರದ್ಧೆ, ನವ್ಯ ಲೇಖಕರು ತಾವು ಹುಟ್ಟಿ ಬಂದ ಪರಿಸರವನ್ನು ಉಪೇಕ್ಷಿಸಿ ಇಂಗ್ಲೆಂಡ್, ಅಮೆರಿಕದ ಜೀವನಶೈಲಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ, ಕಾದಂಬರಿ ಬರೆಯುತ್ತಾರೆ ಎಂದು ಅವರಿಗೆ ತೀವ್ರ ಅಸಮಾಧಾನವಿತ್ತು. ಇಂತಹ ಪುಣೇಕರ ಅವರ ಸಾಹಿತ್ಯದ ಒಳಹುಗಳನ್ನು ಜಿ.ಬಿ.ಹರೀಶ್ ಈ ಕೃತಿಯಲ್ಲಿ ಸಮಗ್ರವಾಗಿ ನೀಡಿದ್ದಾರೆ.
ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...
READ MORE