ಮುಳ್ಳೂರು ನಾಗರಾಜರ ಸಮಗ್ರ ಸಾಹಿತ್ಯದ ಮೂರನೆಯ ಸಂಪುಟ ‘ಕಥೆ, ಕಾದಂಬರಿ, ನವಸಾಕ್ಷರರಿಗೆ ಬರೆದ ಬರೆಹಗಳು’. ಇಲ್ಲಿ ‘ಸಿಂಗಳೀಕನ ಕಥೆಗಳು’ ಕಥಾ ಸಂಕಲನ, ‘ಮರಣ ಮಂಡಳ ಮಧ್ಯದೊಳಗೆ, ದಂಡಕಾರಣ್ಯ’ ಕಾದಂಬರಿ ಹಾಗೂ ‘ನವಸಾಕ್ಷರರಿಗೆ ಬರೆದ ಬರೆಹ’ಗಳನ್ನು ಒಳಗೊಂಡಿದೆ.
ವರ್ತಮಾನ ಬದುಕಿನ ಅನುಭವ ಲೋಕವನ್ನು ಪುರಾಣ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮೌಢ್ಯ, ಕಂದಾಚಾರವನ್ನು ಪ್ರತಿರೋಧಿಸುವ ಬಂಡಾಯ ಗುಣ ಇಲ್ಲಿ ಅಭಿವ್ಯಕ್ತವಾಗಿದೆ.
ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು. ’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ ...
READ MORE