ಕವಿ ಪ್ರೊ. ರವೀಂದ್ರ ಕರ್ಜಗಿ ಅವರು ರಚಿಸಿದ ಸಮಸ್ತ ಕವನಗಳನ್ನು ಅನ್ವಯ ಕಾವ್ಯ ಶೀರ್ಷಿಕೆಯ ಸಂಪುಟದಲ್ಲಿ ಒಟ್ಟಾಗಿಸಿದ್ದಾರೆ ಸಂಪಾದಕ ಪ್ರಭಾಕರ ಜೋಶಿ ಅವರು. ಅನ್ವಯ ಕಾವ್ಯ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ಕಾವ್ಯಕ್ಷೇತ್ರದ ಹಲವು ಘಟ್ಟಗಳ ಅವಸ್ಥಾಂತರಗಳು, ಪ್ರತೀಕಗಳು, ಸಂದರ್ಭಗಳು, ವ್ಯಕ್ತಿಚಿತ್ರಣಗಳು ಕಾಣಸಿಗುತ್ತವೆ. ಕಾವ್ಯಾನುಯಾಯಿ ಕರ್ಜಗಿ ಅವರಿಗೆ ಅನುಪದದ ಮೇಲೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅವರು ಪ್ರಕಟಿಸಿದ ನಾಲ್ಕು ಕವನ ಸಂಕಲನಗಳು ಅನು ಶಬ್ದದಿಂದಲೇ ಶೀರ್ಷಿಕೆ ಹೊತ್ತಿವೆ.
ಅನುಭವ, ಅನುನಯ, ಅನುಶೀಲ ಅಧ್ಯಾಯಗಳ ಮೂಲಕ ರವೀಂದ್ರ ಕರ್ಜಗಿ ಅವರ ಸಮಸ್ತ ಕವಿತೆಗಳು ಈ ಸಮಗ್ರ ಕಾವ್ಯದಲ್ಲಿ ದೊರೆಯಲಿವೆ. ಪ್ರಾರ್ಥನೆ, ಅಭಿರುಚಿ, ಕ್ಯಾಂಪಸ್ಸಿನ ಗಿಳಿ, ನಿಮ್ಮಪ್ಪನ್ಹಂಗೆ ಬರೆವೆ, ಗಾಂಧೀ ಮಹರಾಜ ಕೀ ಜೈ, ಗಲ್ಲದ ಗುಳಿ, ನಾನು-ನನ್ನವರು, ಕಾವ್ಯ, ಸಂಧಿನಿ, ಜ್ಯೋತಿ, ಹೋಳಿ, ಲವ್, ವರಕವಿಗೆ ಸುಸ್ವಾಗತ, ಚುಂಬನ, ಬರಗಾಲ ಬೇಕು ಮುಂತಾದ ಕವಿತೆಗಳು ಅನುಭವ ಅಧ್ಯಾಯದಲ್ಲಿವೆ. ಅನುನಯ ಅಧ್ಯಾಯದಲ್ಲಿ ಕಾಮನ ಸಮಾಧಿ, ಚಲುವ ಕನ್ನಡನಾಡು, ಮುಷ್ಟಿಯಲಿ ಮೋಕ್ಷ, ಹಿರಿಯರು, ಪಾರಿಜಾತ, ಬಂಧುಗಳು, ಬಂದ್‌ಮಾಡ್ತಿ, ಬಾಲಬಡುಕ, ಕೈ ಮುಗಿದು ಒಳಗೆ ಬಾ, ತವಗರು, ಒಪ್ಪಂದ, ಅತಂತ್ರ, ಕಲಬುರ್ಗಿಯಲ್ಲಿ ಮಳೆ, ಕಚ್ಚಾ ತಾಕತ್ತು, ಸ್ಥಿತಿ, ಅಳಿಯನ ಪ್ರಾರ್ಥನೆ, ವರದಕ್ಷಿಣೆಯ ಹಾಯಿಕುಗಳು, ಉಗಾದಿಯ ಹಾಯಿಕುಗಳು ಜೋಗ, ನಾವು ಕವಿಗಳು ಮುಂತಾದ ಕವಿತೆಗಳಿವೆ.
.ಪ್ರಭಾಕರ ಜೋಶಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರು. ಪತ್ರಕರ್ತರು. ಸದ್ಯ, ಕಲಬುರಗಿ ರಂಗಾಯಣದ ನಿರ್ದೇಶಕರು. ಕವಿ ರವೀಂದ್ರ ಕರ್ಜಗಿ ಅವರ ಸಮಗ್ರ ಕಾವ್ಯ ’ಅನ್ವಯ ಕಾವ್ಯ’ ಸಂಪಾದಿಸಿದ್ದಾರೆ. ರಂಗ ಚಟುವಟಿಕೆಯಲ್ಲಿ ತೀವ್ರ ತೊಡಗಿಸಿಕೊಂಡಿದ್ದು, ಹಲವು ಕೃತಿಗಳನ್ನು ಪ್ರಕಾಶಿಸಿದ್ದಾರೆ. ...
READ MORE