ಪಂಚಾಕ್ಷರಿ ಹಿರೇಮಠ ಅವರ ಸಮಗ್ರ ಕಾವ್ಯ (ಸಂಪುಟ-2) ಕೃತಿಯು ಹಿಂದಿಯ ಐದು ಕಾವ್ಯ ಸಂಗ್ರಹ, ಬಂಗಾಲಿಯ ಒಂದು, ರಶಿಯನ್ ಮತ್ತು ಉಜ್ಬೆಕ್ ಭಾಷೆಗಳ ತಲಾ ಒಂದು ಹೀಗೆ ಏಳು ಕವನ ಸಂಗ್ರಹಗಳ ಗುಚ್ಛವಾಗಿದೆ. ಇಲ್ಲಿನ ಹೆಚ್ಚು ಕವಿತೆ ಮತ್ತು ಮುಕ್ತಕಗಳು ಆತ್ಮ, ಪರಮಾತ್ಮ, ಧರ್ಮ, ಕರ್ಮ, ಜನ್ಮ, ಮೃತ್ಯು, ಬಂಧನ, ಮಕ್ತಿ ಮುಂತಾದ ಗಂಭೀರ ತತ್ವಗಳ ಬಗ್ಗೆ ವಿವೇಚಿಸುತ್ತವೆ.
ಪಂಚಾಕ್ಷರಿ ಹಿರೇಮಠ ಅವರು 1933ರ ಜನವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು. ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...
READ MORE