ಸಾಹಿತಿ ಎಲ್. ಹನುಮಂತಯ್ಯನವರ ಬಿಡಿ ಲೇಖನಗಳು ಮತ್ತು ಆತ್ಮಕಥನವನ್ನು ಹೊಂದಿರುವ ಅವರ ಸಮಗ್ರ ಸಂಪುಟದ ಎರಡನೇ ಭಾಗ ಇದು.
ಅಪಾರ ಓದಿನಿಂದಾಗಿ ಸಾಹಿತ್ಯದ ಸೂಕ್ಷ್ಮತೆಯನ್ನು ತಮ್ಮದಾಗಿಸಿಕೊಂಡಿರುವ ಹನುಮಂತಯ್ಯ ತಮ್ಮ ನಿಖರ ನಿಲುವಿನಿಂದಾಗಿ ಗುರುತಿಸಿಕೊಂಡವರು. ಅವರ ಬದುಕಿನ ಹಲವು ಚಿತ್ರಣವನ್ನು ಸಂಪುಟ ನೀಡುತ್ತದೆ. ಬಾಲ್ಯದ ನೆನಪು, ವರ್ತಮಾನದ ಸವಾಲುಗಳು ಹೀಗೆ ಬದುಕಿನ ವಿವಿಧ ಮಗ್ಗಲುಗಳನ್ನು ಕೃತಿ ಪ್ರಸ್ತಾಪಿಸುತ್ತದೆ.
ರಾಜ್ಯಸಭಾ ಸದಸ್ಯರಾಗಿರುವ ಎಲ್. ಹನುಮಂತಯ್ಯ ಪ್ರಮುಖ ಕವಿಗಳಲ್ಲಿ ಒಬ್ಬರು. ಬೆಂಗಳೂರು ಜಿಲ್ಲೆ ರಾಮೇಶ್ವರ ಗ್ರಾಮದವರಾದ ಅವರು ಮೊದಲಿಗೆ ಬ್ಯಾಂಕ್ ನೌಕರಿಯಲ್ಲಿದ್ದರು. ಸೃಜನಶೀಲ ಸಾಹಿತಿ, ವಾಗ್ಮಿ ಹಾಗೂ ವಿಮರ್ಶಕ ಆಗಿರುವ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. 'ಕಪ್ಪು ಕಣ್ಣಿನ ಹುಡುಗಿ', 'ಅವ್ವ (ಕವಿತಾ ಸಂಕಲನ); 'ಅಂಬೇಡ್ಕರ್ ಕವನಗಳು’ (ಸಂಪಾದನೆ) 'ದಲಿತ ಲೋಕದ ಒಳಗೆ' (ವಿಮರ್ಶೆ), ಅಂಬೇಡ್ಕರ್' (ನಾಟಕ) ಪ್ರಕಟಿತ ಕೃತಿಗಳು. ಅವರ ಸಮಗ್ರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಅವರು ಜನಪರ ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ...
READ MORE