ನವೋದಯದ ಮೂವರು ಪ್ರವರ್ತಕ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮಹತ್ತರದ ಸಾಧನೆಯನ್ನು ಮಾಡಿದ್ದಾರೆ. ಅವರನ್ನು ಕನ್ನಡ ವಜ್ರದ ಕಿರೀಟ ಎಂದೇ ಹೇಳ ಬಹುದು. ಭಾಷೆಗೆ ಗೌರವವನ್ನು ತರುವಂತಹ ಅವರ ಕವನಗಳು, ಶ್ರೇಷ್ಠ ಪ್ರಬಂಧಗಳು, ಅನನ್ಯವಾಗಿರುವ ಅವರ ನೃತ್ಯ ರೂಪಕಗಳು, ಮಹಾ ಕಾವ್ಯವಾದ ಶ್ರೀ ಹರಿಚರಿತೆ, ಹಾಗೂ ನಾಟಕಗಳು ಅವರ ಕೃತಿ ಸಾಮರ್ಥ್ಯದ ರಸಪ್ರಜ್ಞೆಯ, ಹಾಗೂ ಭಗವತ್ ಗೀತೆಯ ಕುರುಹುಗಳಾಗಿವೆ. ಈ ಎಲ್ಲಾ ವಿಭಾಗಗಳಿಂದಲೂ ಪ್ರಾತಿನಿಧಿಕವಾದವುಗಳನ್ನು ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE