‘ಕೆರೂರು ವಾಸುದೇವಾಚಾರ್ಯ ಸಮಗ್ರ ಸಂಪುಟ-1’ ಕೃತಿಯು ಎಂ.ಎಂ ಕಲಬುರ್ಗಿ ಅವರು ಪ್ರಧಾನವಾಗಿ ಸಂಪಾಸಿದ ಸಮಗ್ರ ನಾಟಕ ಸಂಪುಟ ಕೃತಿಯಾಗಿದೆ. ಶ್ಯಾಮಸುಂದರ ಬಿದರಕುಂದಿ, ರಮಾಕಾಂತ ಜೋಶಿ ಹಾಗೂ ಜಿ.ಎಂ ಹೆಗಡೆ ಅವರು ಕೃತಿಯನ್ನು ಸಂಪಾದಿಸಿದ್ದಾರೆ. ಕಥಾ ಸಂಪುಟವನ್ನು ಮೂರು ಸಂಪುಟವಾಗಿ ವಿಭಾಗಿಸಿದ್ದು ಸಂಪುಟ 1 ರಲ್ಲಿ ನಲದಮಯಂತಿ, ವಸಂತ ಯಾಮಿನೀ ಸ್ವಪ್ನ ಶ್ರೇ಼ಷ್ಠಿ, ಪತಿವಶೀಕರಣ, ರುಕ್ಮಿಣೀ ಹರಣ, ಪುರಂದರ ದಾಸ ನಾಟಕ, ರಮೇಶ ಲಲಿತಾ (ಅಪೂರ್ಣಗಳನ್ನು ಒಳಗೊಂಡಿದೆ).ಕೃತಿಗೆ ಪ್ರಸ್ತಾವನೆಯನ್ನು ಬರೆದಿರುವ ಕೀರ್ತಿನಾಥ ಕುರ್ತಕೋಟಿ ಅವರು, ದಿ. ಕೆರೂರ ವಾಸುದೇವಾಚಾರ್ಯರರ ಒಟ್ಟು ನಾಲ್ಕು ನಾಟಕಗಳು ಮಾತ್ರ ಪ್ರಕಟವಾಗಿವೆ. 'ನಲ ದಮಯಂತಿ' 'ವಸಂತಯಾಮಿನೀ ಸಪ್ಪ ಚಮತ್ಕಾರ', 'ಸುರತ ನಗರದ ಶ್ರೇಷ್ಠ' ಮತ್ತು 'ಪತಿವಶೀಕರಣ', ಇವುಗಳಲ್ಲಿ ಮೊದಲನೆಯದೊಂದೇ ಸ್ವತಂತ್ರ ನಾಟಕವಾಗಿದ್ದು, ಉಳಿದವುಗಳು ಇಂಗ್ಲಿಷ್ ನಾಟಕಗಳ ಭಾಷಾಂತರಗಳಾಗಿವೆ. 'ಪತಿವಶೀಕರಣ'ವೇ ಅವರು ಬರೆದ ಕೊನೆಯ ನಾಟಕವಾಗಿದ್ದಿರಬೇಕೆಂದು ಇಲ್ಲಿಯವರೆಗೆ ಎಲ್ಲರ ತಿಳಿವಳಿಕೆಯಾಗಿತ್ತು. ಆದರೆ 'ರುಕ್ಕಿಣೀಹರಣ' ನಾಟಕದ ಮೂರು ಅಂಕಗಳೂ, 'ಪುರಂದರದಾಸ' ನಾಟಕದ ಒಂದೆರಡು ಪ್ರವೇಶಗಳೂ ಹಸ್ತಪ್ರತಿಗಳಲ್ಲಿ ದೊರೆತು ಸಂಶೋಧನಕ್ಕೆ ಹೊಸ ಸಾಮಗ್ರಿ ದೊರೆತಂತಾಗಿದೆ. ಈ ನಾಟಕಗಳನ್ನು ಆಚಾರ್ಯರು ಯಾವಾಗ ಬರೆದರೆಂಬುದನ್ನು ನಿಶ್ಚಿತವಾಗಿ ಹೇಳಲು ಆಧಾರವಿಲ್ಲ, ಇವುಗಳ ರಚನೆ ನಡೆದಿರುವಾಗಲೇ ಅವರು ಕಾಲವಾಗಿರಬಹುದು, ಇಲ್ಲವೆ , ಮೊದಲೇ ಅರ್ಧಕ್ಕೆ ಬಿಟ್ಟು ಕೊಟ್ಟ ಕೃತಿಗಳೂ ಆಗಿರಬಹುದು. 1917ರಲ್ಲಿ ಆಚಾರ್ಯರು 'ಸಚಿತ್ರ ಭಾರತ'ವನ್ನು ಬಿಟ್ಟು 'ಶುಭೋದಯ'ವೆಂಬ ತಮ್ಮದೇ ಆದ ವಾರಪತ್ರಿಕೆಯನ್ನು ನಡೆಸತೊಡಗಿದರು. ಸಚಿತ್ರ ಭಾರತ'ದಲ್ಲಿ 'ರಮೇಶ-ಲಲಿತಾ ನಾಟಕ' ಹಾಗೂ ಬಾಣ ಕಾದಂಬರಿಯ ಕನ್ನಡ ಭಾಷಾಂತರ ಇವುಗಳನ್ನು ಅವರು ಅರ್ಧಕ್ಕೇ ಬಿಟ್ಟುಕೊಟ್ಟಿದ್ದರೆಂಬ ಸಂಗತಿಯನ್ನು ನೆನೆದರೆ, ಈ ನಾಟಕಗಳನ್ನು ಅದೇ ಕಾಲಕ್ಕೆ ಬರೆದಿರಬಹುದೇನೋ ಎಂದು ತೋರುತ್ತದೆ’ ಎಂದಿದ್ದಾರೆ.
ವಿಮರ್ಶಕ ಜಿ.ಎಂ. ಹೆಗಡೆ ಅವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ. ಕೃತಿಗಳು: ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ. ...
READ MORE