ತೀ.ನಂ.ಶ್ರೀ. ಸಮಗ್ರ ಗದ್ಯ ಸಂಪುಟ

Author : ತೀ.ನಂ.ಶ್ರೀ

Pages 786

₹ 580.00




Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
Phone: 08022107704

Synopsys

ಬಹುಮುಖ ಪ್ರತಿಭೆಯ ಗುರು ತಿ.ನಂ.ಶ್ರೀ ಅವರ ವಿದ್ವತ್ ಬರಹಗಳನ್ನು ಸಮಗ್ರವಾಗಿ ಪ್ರಕಟಿಸಿರುವ ಕೃತಿ ಇದು. ಈ ಹಿಂದೆಯೂ ಇಂತಹುದ್ದೊಂದು ಯಶಸ್ವಿ ಯತ್ನ ನಡೆದಿತ್ತು.  ಸಂಸ್ಕೃತ , ಹಳಗನ್ನಡ , ಹೊಸಗನ್ನಡ , ಭಾಷೆ - ಭಾಷಾವಿಜ್ಞಾನ , ಛಂದಸ್ಸು , ಇತರರ ಕೃತಿಗಳಿಗೆ ಬರೆದ ಮುನ್ನುಡಿ ಮತ್ತು ಬಿಡಿ ಲೇಖನಗಳು , ಲಲಿತ ಪ್ರಬಂಧ ಹಾಗೂ ಅವರು ಬರೆದ ಪುಸ್ತಕಗಳ ಅರಿಕೆಯನ್ನು ಕೃತಿ ಒಳಗೊಂಡಿದೆ. ವಾಲ್ಮೀಕಿಯಿಂದ ಪಂಪನವರೆಗೆ ಅವರು ಸಾಹಿತ್ಯ ಸಂವಾದವೊಂದನ್ನು ಸೃಷ್ಟಿಸಿದ್ದರು. ಜಿ.ಎಸ್. ಶಿವರುದ್ರಪ್ಪನವರ ಪ್ರಾಸ್ತಾವಿಕ ಮಾತುಗಳು ಕೃತಿಯ ಮೆರಗನ್ನು ಹೆಚ್ಚಿಸಿವೆ.  

About the Author

ತೀ.ನಂ.ಶ್ರೀ
(26 November 1906 - 07 September 1966)

ತೀ.ನಂ.ಶ್ರೀ ಎಂತಲೇ ಪರಿಚಿತರಾಗಿರುವ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹತ್ತಿರದ ತೀರ್ಥಪುರ. ಮೈಸೂರಿನಲ್ಲಿ ಪದವಿ ಪಡೆದಿದ್ದ ಇವರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಕೇವಲ ಒಂದುವರೆ ತಿಂಗಳು ಮಾತ್ರ ಅಮಾಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವರು ಕಾಲೇಜಿನ ಅಧ್ಯಾಪಕರಾದರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೆದ ಕೃತಿಗಳೆಂದರೆ ಒಲುಮೆ, ಹೆಣ್ಣು ಮಕ್ಕಳ ಪದಗಳು, ಬಿಡಿಮುತ್ತು, ಪಂಪ, ನಂಬಿಯಣ್ಣನರಗಳೆ, ರನ್ನನ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಮಾಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ, ನಂಟರು ಇವರ ಪ್ರಮುಖ ಕೃತಿಗಳು. ಇವರು ಬರೆದಿರುವ ಭಾರತೀಯ ...

READ MORE

Related Books