ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಒಟ್ಟು 22 ಸಂಪುಟದಲ್ಲಿ ಪ್ರಕಟವಾಗಿವೆ. ಈ ಇಪ್ಪತ್ತೆರಡೂ ಸಂಪುಟಗಳಲ್ಲಿ ಬರುವ ಆಯಾ ವಿಷಯದ ಬಗ್ಗೆ ಯಾವ ಸಂಪುಟದ ಯಾವ ಪುಟವನ್ನು ನೋಡಬಹುದು ಎಂಬುದನ್ನು ಕಂಡುಕೊಳ್ಳಲು ಸುಲಭವಾಗುವ ರೀತಿಯಲ್ಲಿ ಈ ಸಮಗ್ರ ವಿಷಯಸೂಚಿಯಾಗಿ ಈ ಸಂಪುಟವು ನೆರವಾಗುತ್ತದೆ. ಇದರಿಂದ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಯ ಮತ್ತು ಶ್ರಮದ ಉಳಿತಾಯವಾಗಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕೃತ ಆರ್. ಲಕ್ಷ್ಮೀನಾರಾಯಣ ಅವರು ಹುಟ್ಟಿದ್ದು 1949ರ ಡಿಸೆಂಬರ್ 2ರಂದು ತುಮಕೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿರುವ ಇವರು ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ, ಕೆಲಕಾಲ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರು ಬರೆದಿರುವ ಕೃತಿಗಳೆಂದರೆ; ಮಾಸ್ತಿ, ಆಹ್ಲಾದ, ಎಸ್.ವಿ. ಪರಮೇಶ್ವರ ಭಟ್ಟ-ವಿಮರ್ಶಾ ಕೃತಿಗಳು. ಚಿನ್ನದ ಕಳಶ ಬರ್ಟೋಲ್ಟ್ ಬ್ರೆಕ್ಸ್, ವಾಜಿಯ ವಿವೇಕ, ಇನ್ನೊಬ್ಬ ದ್ರೋಣಾಚಾರ್ಯ, ಅನುರೂಪ ಅನುವಾದಿತ ಕೃತಿಗಳು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ...
READ MORE