‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 7’ ಕೆ.ಸಿ. ಶಿವಾರೆಡ್ಡಿ ಅವರ ಆತ್ಮಕತೆ, ಪ್ರವಾಸ ಕಥನ, ಕೃಷಿ ಚಿಂತನೆ ವಿಚಾರವನ್ನೊಳಗೊಂಡ ಸಮಗ್ರ ಸಾಹಿತ್ಯ ಕೃತಿಯಾಗಿದೆ. ಅಣ್ಣನ ನೆನಪು ಕೃತಿಯಲ್ಲಿನ ಸಂಶ್ಲೇಷಣೆ ಮತ್ತು ವಿಶ್ಲೇಷಣೆ, ಸ್ಕೂಲಿನಿಂದ ಪರಾರಿ, ಅಣ್ಣನ ಆಸ್ಥಾನದಲ್ಲಿ, ಪೆಂಡ್ಯುಲಮ್ ಬಾಲದ ನಾಯಿ, ಮೇಕೆ ಶಿಕಾರಿ, ಯಾ ದೇವಿ ಸರ್ವಭೂತೇಷು, ತುರುಚೆ ಸೊಪ್ಪಿನ ಚಿಕಿತ್ಸೆ, ಮ್ಮಣ್ಣನ ಸಮೀಕರಣ, ಕೂಸಿನ ಕನಸು, ಅಳಿಲಿನ ದುರಂತ, ಅಸತೋ ಮಾ ಸದ್ಗಮಯ, ದೇಶ ವಿಭಜನೆ ಮತ್ತು ಕಲಾಲ್ಬಾಬು, ಟಿ.ಎಸ್.ಎಲಿಯಟ್ ಮತ್ತು ಪೋಲೀಸ್ ಪೇದೆ, ಕನ್ನಡ ಚಳವಳಿಯ ಬಹಿರಂಗ ಸಭೆ, ಸೈಕಲ್ ಮತ್ತು ಜವಾಹರ್‌ಲಾಲ್ ನೆಹರೂ, ಎಂಟು ರೂಪಾಯಿ ದಂಡ, ಬುಲ್‌ಬುಲ್ ತರಂಗ್, ದಂತವಾದ್ಯ, ಗ್ರಾಮಫೋನ್ ಗುರುಗಳು, ಮೆಡಿಟೇಷನ್ ರೂಮ್, ಕೊಳ್ಳಿ ಕ್ಷೌರಿಕ, ಗುಡ್ ಬೈ ಶಹನಾಯ್, ಸಂದರ್ಶನ, ಕ್ಯಾನ್‌ವಾಸ್ ಕಾಟ್ ಮತ್ತು ದೆವ್ವದ ಕಾಟ, ಸ್ಕೂಟರ್ ರಿಪೇರಿ, ಶಾಮಣ್ಣನ ಹುಚ್ಚು ಕುದುರೆ, ಮಂತ್ರ ಮಾಂಗಲ್ಯ ಸಹಿತ 41 ಬರಹಗಳನ್ನು ಕಾಣಬಹುದು.
ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್ ವಿಭಾಗದಲ್ಲಿ ರನ್ ವೇ, ಅಂಡಮಾನಿನ ಕನಸುಗಳು, ಮೂಡಿಗೆರೆಯಿಂದ ಮದ್ರಾಸಿಗೆ, ನಾನ್‌ಕೌರಿ, ಪೋರ್ಟ್‌ಸ್ಟೇರ್, ಟಾರೆಡೋ ಮತ್ತು ಕರಿಮೀನು, ರಾಸ್ ಐಲೆಂಡ್ ಮತ್ತು ಮಲೇರಿಯ, ಅಂಡಮಾನಿನ ಲಾಬ್‌ಸ್ಟರ್, ಮಡ್‌ಕ್ಯಾಬ್, ಆಸ್ಟರ್, ಚಿರಿಯಾಟಾಪಿನ ನೀಲಿಯ ಮೀನು, ವಂಡೂರಿನ ಹವಳದ ದಂಡೆಗಳು, ಮಾಯಾಬಂದರ್ ಚಲೋ ಓಂಗೇ, ಕಗ್ಗತ್ತಲಲ್ಲಿ ಕರಾಳ ಛಾಯೆಗಳು, ಟಿಕೆಟ್ಟಿಲ್ಲದ ಪಯಣಿಗರು, ಇನ್ನಿಂಗ್ಸ್ ಡಿಫೀಟ್ ಲೇಖನಗಳಿವೆ.
ಮಹಾನದಿ ನೈಲ್ ವಿಭಾಗದಲ್ಲಿ ಮಹಾನದಿ ನೈಲ್, ಮಹಾ ಸರೋವರಗಳು, ಕಗ್ಗತ್ತಲ ರಾಜ್ಯಗಳಲ್ಲಿ, ಚಂದ್ರಪರ್ವತ ಮತ್ತು ಬೇಕರ್ ದಂಪತಿಗಳು ಸೇರಿದಂತೆ ಐದು ಬರಹಗಳನ್ನು ಕಾಣಬಹುದಾಗಿದೆ,
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE