ಪ್ರೊ.ಕಾಳೇಗೌಡ ನಾಗವಾರ ಅವರ ಆಯ್ದ ಬರಹಗಳು

Author : ಕಾಳೇಗೌಡ ನಾಗವಾರ

Pages 864

₹ 520.00




Year of Publication: 2011
Published by: ವಾಚಸ್ಪತಿ ಪ್ರಕಾಶನ
Address: #658, 2ನೇ ಮಹಡಿ, 4ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, E ಮತ್ತು F ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ, ಮೈಸೂರು-570023

Synopsys

`ಆಯ್ದ ಬರಹಗಳು’ ಕಾಳೇಗೌಡ ನಾಗವಾರ ಅವರ ಬರಹಗಳ ಕೃತಿಯಾಗಿದೆ. ಪ್ರೊ. ಕಾಳೇಗೌಡ ನಾಗವಾರ ಅವರು ಕನ್ನಡ ಸಾಂಸ್ಕೃತಿಕ ಲೋಕದ ಮಾನವೀಯ ಕತೆಗಾರ, ಅಪಾರ ಅಂತಃಕರಣದ ಕವಿ, ದೇಶೀ ಸಂಸ್ಕೃತಿಗಳ ಬಗ್ಗೆ ತುಂಬು ಅಕ್ಕರೆಯಿಂದಿರುವ ಅವರು ಕರ್ನಾಟಕದ ಉದ್ದಗಲಕ್ಕೂ ಅವಿರತವಾಗಿ ಸಂಚರಿಸುತ್ತಿರುವವರು, ತಮ್ಮೊಳಗಿನ ಸೂಕ್ಷ್ಮ ಸೃಜನಶೀಲ ಮನಸ್ಸನ್ನು ಕಟ್ಟೆಚ್ಚರದಿಂದ ಕಾಯ್ದುಕೊಂಡು ಬಂದಿರುವ ಕ್ರಿಯಾಶೀಲ ಲೇಖಕರು. ಅಚ್ಚ ಕನ್ನಡದ ಗ್ರಾಮೀಣ ಸತ್ವದಿಂದ ರೂಪುಗೊಂಡ ನಾಗವಾರ ಅವರು ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದಿಂದೀಚಿನ ಕನ್ನಡ ಸೃಜನಶೀಲ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದ್ದಾರೆ. - ಜಿ.ವಿ. ಆನಂದಮೂರ್ತಿ

About the Author

ಕಾಳೇಗೌಡ ನಾಗವಾರ
(02 February 1947)

ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971)  ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.  ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು.  ಕಾಳೇಗೌಡ ನಾಗವಾರ ಅವರ ...

READ MORE

Related Books