ಡಾ. ಬಿ.ಆರ್. ಅಂಬೇಡ್ಕರ್ ಅವರು ವೇದಗಳನ್ನು ದೋಷರಾಹಿತ್ಯವೆಂಬಂತಹ ನಂಬಿಕೆಯನ್ನು ಪ್ರಶ್ನಿಸುವುದರೊಂದಿಗೆ ಅಲ್ಲಿನ ಆಧ್ಯಾತ್ಮಿಕತೆಯ ಅಭಾವ, ವೇದ ಉಪನಿಷತ್ತುಗಳ ಮಧ್ಯದಲ್ಲಿನ ವೈರುಧ್ಯ, ಹಿಂದೂ ದೇವರುಗಳ ಏಳು ಬೀಳುಗಳು, ವರ್ಣಗಳು, ಆಶ್ರಮ ಧರ್ಮ, ಬಲತ್ಕಾರದ ವಿವಾಹಗಳು, ಮನುಸ್ಮೃತಿ ಮತ್ತು ಅದರ ಬಗೆಗಿನ ಸಂದೇಹಗಳು, ಮನ್ವಂತರಗಳಲ್ಲಿನ ಗೊಂದಲಗಳು ಹೀಗೆ ಇವೆಲ್ಲವುಗಳಿಂದ ಕೂಡಿ ನಿಂತ ನೀರಾಗಿದ್ದ ಧಾರ್ಮಿಕ ಪ್ರಪಂಚವನ್ನು ಹೊಡೆದೆಬ್ಬಿಸಲು ಚರ್ಚಿಸಿರುವ ವಿಷಯಗಳು ಇಲ್ಲಿ ವ್ಯಕ್ತವಾಗಿದೆ.