ಹಿರಿಯ ವಿಮರ್ಶಕ ಕೆ.ವಿ.ನಾರಾಯಣ ಅವರ ಸಮಗ್ರ ಬರಹಗಳ ಸರಣಿಯ ನಾಲ್ಕನೆಯ ಸಂಪುಟವಿದು. ನಾರಾಯಣ ಅವರು ಧ್ವನ್ಯಾಲೋಕ ಕುರಿತು ನಡೆಸಿದ ಸಂಶೋಧನೆಯನ್ನು ಒಳಗೊಂಡಿದೆ. ಈ ಹಿಂದೆ ಪ್ರತ್ಯೇಕ ಪುಸ್ತಕವಾಗಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧ. ಅಧ್ಯಯನದ ಉದ್ದೇಶ, ವ್ಯಾಪ್ತಿ ಮತ್ತು ಸ್ವರೂಪ ಅಧ್ಯಾಯದೊಂದಿಗೆ ಆರಂಭವಾಗುತ್ತದೆ. ಎರಡನೆಯ ಭಾಗದಲ್ಲಿ ಧ್ವನ್ಯಾಲೋಕ ಪೂರ್ವ ಕಾವ್ಯ ಮೀಮಾಂಸೆ: ಪರಿಕಲ್ಪನೆಗಳು ಮತ್ತು ವಿಕಾಸದ ಕುರಿತ ಚರ್ಚೆ ಇದೆ. ಮೂರನೆಯ ಭಾಗದಲ್ಲಿ ಧ್ವನ್ಯಾಲೋಕ: ಕೃತಿ, ಕರ್ತೃ ವಿಚಾರ, ಸ್ಫೋಟ ಮತ್ತು ಧ್ವನಿ, ಧ್ವನಿತತ್ವ ಸ್ವರೂಪ: ವಿವರಣೆ, ’ಧ್ವನ್ಯಾಲೋಕ’ದಲ್ಲಿ ಧ್ವನಿ ಮತ್ತು ಇತರ ಕಾವ್ಯ ಮೀಮಾಂಸಾ ಕಲ್ಪನೆಗಳು, ಶ್ರವ್ಯ ಮತ್ತು ದೃಶ್ಯಕಾವ್ಯಗಳ ಬಗೆಗೆ ಧ್ವನ್ಯಾಲೋಕದ ನಿಲುವುಗಳು, ಧ್ವನಿಸಿದ್ಧಾಂತ ಮತ್ತು ಇತರ ಕಲೆಗಳು: ಧ್ವನ್ಯಾಲೋಕದಲ್ಲಿ ಚರ್ಚೆ, ಧ್ವನಿ ವಿರೋಧಿ ಸಿದ್ಧಾಂತಗಳು, ಧ್ವನಿ ಸಮರ್ಥನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಧ್ವನ್ಯಾಲೋಕದ ಕಾವ್ಯತತ್ವಗಳು, ಆನಂದವರ್ಧನನ ಕಾವ್ಯ ತತ್ವಗಳು- ದೃಷ್ಟಿ ಹಾಗೂ ವೈಶಿಷ್ಟ್ಯ, ಧ್ವನ್ಯಾಲೋ- ಆಧುನಿ ಕಾವ್ಯ ಚಿಂತನೆಗಳ ಹಿನ್ನೆಲೆಯಲ್ಲಿ ಎಂಬ ಅಧ್ಯಾಯಗಳಿವೆ.
ಅನುಬಂಧದಲ್ಲಿ ಕಾವ್ಯ ಮೀಮಾಂಸಾ ಗ್ರಂಥಗಳು, ಸಂಸ್ಕೃತ, ಕನ್ನಡ ಗ್ರಂಥಗಳು ಮತ್ತು ಲೇಖನಗಳ ಪಟ್ಟಿ ನೀಡಲಾಗಿದೆ. ಕೃತಿಕಾರರ, ಕೃತಿ ಹಾಗೂ ವಿಷಯ ಸೂಚಿ ನೀಡಲಾಗಿದೆ.
©2024 Book Brahma Private Limited.