‘ಕಮಲಾದಾಸ್ ಸಮಗ್ರ ಕಾದಂಬರಿಗಳು’ ಮಾಧವಿ ಕುಟ್ಟಿ ಎಂಬ ಹೆಸರಿನಲ್ಲಿ ಮಲೆಯಾಳಂ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಲೇಖಕಿ ಕಮಮಾದಾಸ್ ಅವರ ಕಾದಂಬರಿಗಳನ್ನು ಅಶೋಕ್ ಕುಮಾರ್ ಕನ್ನಡೀಕರಿಸಿದ್ದಾರೆ. ಅತ್ಯಂತ ನಿಷ್ಠುರ ಬರಹಗಳ ಮೂಲಕ ಗುರುತಿಸಿಕೊಂಡಿದ್ದ ಕಮಲಾದಾಸ್ ಬದುಕಿನ ಅನುಭವಗಳಿಗೆ ಅಕ್ಷರರೂಪ ನೀಡುತ್ತಾ ಜಾಗತಿಕ ಸಾಹಿತ್ಯವಲಯದಲ್ಲೂ ವಿಶಿಷ್ಟವಾದ ಅಸ್ಮಿತೆ ಕಟ್ಟಿಕೊಂಡವರು.
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE