ಭಾರತ ಸಂವಿಧಾನದ ರಚನೆಯ ಅವಧಿಯಲ್ಲೇ ಮಂಡಿತವಾದ ಹಿಂದೂ ಸಂಹಿತೆ (ಹಿಂದೂ ಕೋಡ್) ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಕ್ರಿಯೆ, ಕರಡು ಹಿಂದೂ ಸಂಹಿತೆ ಮಸೂದೆ, ಹಿಂದೂ ಸಂಹಿತೆ ಮಸೂದೆ ಆಯ್ಕೆ ಸಮಿತಿಯಿಂದ ತಿದ್ದುಪಡಿ, ಪರಿಶೀಲನಾ ಸಮಿತಿಯ ಪರಿಶೀಲನೆ, ನಂತರ ಮಸೂದೆಯ ಮೇಲಿನ ಚರ್ಚೆಗಳನ್ನು ಒಳಗೊಂಡಿರುವ ಈ ಸಂಪುಟವು ಡಾ. ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ರೂಪುಗೊಂಡಿದ್ದ ಹಿಂದೂ ಸಂಹಿತೆ ಮಸೂದೆಯು ಎಷ್ಟು ಮಹತ್ವದ್ದಾಗಿತ್ತೊ ಅಷ್ಟೇ ವಿವಾದಾತ್ಮಕವೂ ಆಗಿತ್ತು. ಈ ಮಹತ್ವದ ಮಸೂದೆಯ ಮೇಲೆ ನಡೆದ ಚರ್ಚೆ, ಉತ್ತರ ಪ್ರತ್ಯುತ್ತರಗಳನ್ನು ಈ ಸಂಪುಟದಲ್ಲಿ ಕಾಣಬಹುದು.