ಕವಿ-ಚಿಂತಕ ಕೆ. ಎಸ್. ನಿಸಾರ ಅಹಮದ್ ಅವರ ಗದ್ಯ ಬರೆಹಗಳ ಸಮಗ್ರ ಸಂಪುಟವಿದು. ಈ ಕೃತಿಯಲ್ಲಿ 1. ಇದು ಬರಿ ಬೆಡಗಲ್ಲೋ ಅಣ್ಣ (ಸ್ಥಳೀಯ; ಮಂಥನ, ಅವಲೋಕನ ಹಾಗೂ ವಿವೇಚನ ಹೀಗೆ ಉಪಶೀರ್ಷಿಕೆಗಳಡಿ ಹಲವಾರು ಲೇಖನಗಳನ್ನು ಕ್ರೋಢಿಕರಿಸಲಾಗಿದೆ. 2. ಹಿರಿಯರು ಹರಸಿದ ಹೆದ್ದಾರಿ (ಕನ್ನಡದ ನುಡಿ ಮುಡಿಗೆ ಕುರ್ ಆನ್ ನ ಸಿರಿ ಕೊಡುಗೆ, ಮುಳ್ಳಿನ ಮುಕುಟದ ಮಸೀಹ ಸೇರಿದಂತೆ ಒಟ್ಟು 10 ಲೇಖನಗಳು) ,3. ಅಚ್ಚು-ಮೆಚ್ಚು( ಆಸೆ ಸಂಕಲ್ಪಗಳ ಅನ್ಯೋನ್ಯತೆ, ಪ್ರಜಾಪ್ರಭುತ್ವದ ಸುತ್ತಮುತ್ತ ಸೇರಿದಂತೆ ಇತರೆ ಲೇಖನಗಳು) 4. ವಿಚಾರ-ವಿಹಾರ (ಕಥೆ ಕೇಳು ಗುಬ್ಬಕ್ಕ; ನಿನ್ನ ವ್ಯಥೆಯ ಕಥೆ ಕೇಳು, ನಡೀರ ಓಗಾನ; ಗಿಡ ನೆಡಾನ, ವಯಸ್ಸೆಂಬ ಶಿಕ್ಷಕ, ಬೈ ವಿಮರ್ಶೆ ಜೈ ವಿಮರ್ಶೆ ಒಟ್ಟು 10 ಲೇಖನಗಳು), ಹಾಗೂ 5. ಮನದೊಂದಿಗೆ ಮಾತುಕತೆ (ಸಾತ್ವಿಕ ದೈವೀ ಸ್ವರೂಪಿ ಸರಸ್ವತಿ, ನೆಹರು ಅಲ್ಲದಿದ್ದರೆ ಯಾರು ಪ್ರಸ್ತುತ?, ವಿಜ್ಞಾನ ವಿಚಾರ ವಿವೇಚನೆ ಸೇರಿದಂತೆ ಇತರೆ ಲೇಖನಗಳು)-ಈ ಐದು ಸಂಕಲನಗಳ ಸಮಗ್ರ ಲೇಖನಗಳನ್ನು ಸಂಕಲಿಸಿದ ಬೃಹತ್ ಪುಸ್ತಕವಿದು.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE