ಧವಳಕೀರ್ತಿ (ಜಿನರಾಜ ಹೆಗ್ಡೆ ಜನ್ಮ ಶತಮಾನೋತ್ಸವ ಸವಿನೆನಪಿನ ಸಂಚಿಕೆ)

Author : ಅರುಣಕುಮಾರ್ ಎಸ್. ಆರ್.

Pages 131

₹ 100.00




Year of Publication: 2003
Published by: ಕೆ.ಬಿ.ಜೆ. ಜನ್ಮ ಶತಮಾನೋತ್ಸವ ಸಮಿತಿ
Address: ಕಾಂತಾವರ, ಉಡುಪಿ

Synopsys

ಕಾಂತಾವರದ ಬಾರಾಡಿ ಬೀಡಿನ ಜಿನರಾಜ ಹೆಗ್ಡೆಯವರ ಜನ್ಮ ಶತಮಾನೋತ್ಸವದ ಸವಿನೆನಪಿಗಾಗಿ ಕೆ. ಬಿ. ಜಿನರಾಜ ಹೆಗ್ಡೆಯವರ ಕುರಿತಾಗಿ 'ಧವಳಕೀರ್ತಿ' ಸ್ಮರಣ ಸಂಚಿಕೆಯನ್ನು ರಚಿಸಲಾಗಿದೆ.

ಕರ್ನಾಟಕ ಏಕೀಕರಣ ಕುರಿತ ಅವರ ಅವಿರತ ಹೋರಾಟ ಹಾಗೂ ಭಾರತದ ಸಮಗ್ರತೆಗಾಗಿ ಅವರ ಹಗಲಿರುಳಿನ ದುಡಿಮೆಗೆ ಹೆಸರಾದವರು ಜಿನರಾಜರು. ಇವರ ಬದುಕು, ಬರೆಹ, ಸಾಧನೆ, ಕರ್ನಾಟಕ ಏಕೀಕರಣದಲ್ಲಿ ಜಿನರಾಜರ ಪಾತ್ರದ ಕುರಿತು ಕೃತಿಯು ಸಮಗ್ರ ಚಿತ್ರಣ ನೀಡಿದೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books