ಈ ಸಂಪುಟವು ಡಾ.ಅಂಬೇಡ್ಕರರ ಜೀವನದ ಅತ್ಯಂತ ಮಹತ್ವದ ಅವಧಿಗೆ ಸಂಬಂಧಿಸಿದ್ದಾಗಿದೆ. ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದಿದ್ದ ಅವರು ತಮ್ಮ ಪರಿನಿರ್ವಾಣಕ್ಕೆ ಮೊದಲು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು. ಈ ಸಂಪುಟದಲ್ಲಿ ಸಿದ್ಧಾರ್ಥ ಗೌತಮ ಬುದ್ಧನಾದ ಬಗೆ, ಬುದ್ಧನ ವಿಷಾದ ಯೋಗ, ಬುದ್ಧನ ಉಪದೇಶ, ಅವನ ಉಪದೇಶಗಳಿಂದ ಪರಿವರ್ತನೆಯಾದವರ ವಿವರ, ಬುದ್ಧನ ಗೃಹಸ್ಥ ಜೀವನದ ಕುರಿತು, ಕೆಳವರ್ಗದವರ, ದೀನರ, ಸ್ತ್ರೀಯರ, ಪತಿತರ, ಅಪರಾಧಿಗಳ ಪರಿವರ್ತನೆ, ಬುದ್ಧನ ಧರ್ಮ ಬೋಧನೆ, ಧರ್ಮದ ಬಗೆಗಿನ ವಿವಿಧ ದೃಷ್ಟಿಕೋನ, ಧರ್ಮಾ ಧರ್ಮಗಳ ವಿವೇಚನೆ, ಬುದ್ಧನ ಪರಿಕಲ್ಪನೆ, ಬುದ್ಧನ ವ್ಯಕ್ತಿತ್ವ, ಮಾನವೀಯತೆಯ ಹಿರಿಮೆಯನ್ನು ಈ ಸಂಪುಟವು ವಿವರಿಸುತ್ತದೆ.