ಪಂಡಿತ್ ದೀನದಯಾಳ್ ಉಪಾಧ್ಯಾಯರಿಗೆ ಅರ್ಥಶಾಸ್ತ್ರದಲ್ಲಿ ಇದ್ದ ವಿಶ್ಲೇಷಣಾತ್ಮಕ ಸಾಮರ್ಥ್ಯ ನಿಚ್ಚಳವಾಗಿ ಈ ಸಂಪುಟದಲ್ಲಿ ಕಾಣುತ್ತದೆ. ಮೊದಲ ಎರಡು ಪಂಚವಾರ್ಷಿಕ ಯೋಜನೆಗಳ ಹಲವು ಮಗ್ಗುಲುಗಳ ಬಗ್ಗೆ ಹರಿತವಾದ ವಿಶ್ಲೇಷಣೆಯನ್ನು ಇಲ್ಲಿ ಮಾಡಿದ್ದಾರೆ. ಯೋಜನೆಯ ಸ್ವರೂಪ ಮತ್ತು ಉದ್ದೇಶ, ಯೋಜನೆಗಳ ಚಾರಿತ್ರಿಕ ನೋಟ, ಮೊದಲ ಪಂಚವಾರ್ಷಿಕ ಯೋಜನೆಯಿಂದ ಅಭಿವೃದ್ಧಿಯಲ್ಲಾದ ಪರಿಣಾಮ ಯೋಜನಾ ವೆಚ್ಚ, ಅದರ ನ್ಯೂನ್ಯತೆಗಳು, ವಿದೇಶಿ ಮತ್ತು ಖಾಸಗಿ ಬಂಡವಾಳ, ನಮ್ಮ ಯೋಜನೆಗಳು ಪ್ರಾಥಮಿಕ ಹಂತಗಳಲ್ಲಿಯೇ ಹೇಗೆ ಎಡವುತ್ತವೆ , ಸಮಾಜವಾದದ ಕಡೆಗಿನ ಓಲು, ಸೋವಿಯತ್ ದೇಶದ ಪ್ರಭಾವ ನಮ್ಮ ಸ್ಥಳೀಯ ಆಲೋಚನೆಗಳನ್ನು ಹೇಗೆ ಆಳುತ್ತಿವೆ ಮತ್ತು ವಿಫಲಗೊಳಿಸುತ್ತಿವೆ ಇವುಗಳ ಕುರಿತು ವಿಶ್ಲೇಷಣೆಗಳನ್ನು ಈ ಸಂಪುಟವು ಒಳಗೊಂಡಿದೆ.