‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 14’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಕೃತಿಯಾಗಿದೆ. ಕನ್ನಡ ಸಾಂಸ್ಕೃತಿಕ ಜಗತ್ತಿನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳು ಪ್ರಾರಂಭಿಕ ಯೋಚನೆಗಳಲ್ಲಿ ಕಾಲಕಾಲಕ್ಕೆ ಉಂಟುಮಾಡಿದ ತಲ್ಲಣಗಳು ಹೊಸ ಪ್ರಯೋಗಗಳಿಗೆ ಕಾರಣವಾದದ್ದು ಬಹುಮುಖ್ಯ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವದ ಕಾಲಘಟ್ಟದಲ್ಲಿ ಅವರ ಕೃತಿಗಳು ಹೊಸ ಹೊಸ ದಿಗಂತಗಳು ನೋಟಕ್ಕೆ ದೊರಕುವಲ್ಲಿ ಕಾರಣವಾದವು ಎನ್ನುವುದನ್ನು ನಾವು ಈ ಕೃತಿಯ ಮುಖೇನ ಕಾಣಬಹುದು. ಮುಖ್ಯವಾಗಿ ಈ ಕೃತಿಯನ್ನು ಲೋಹಿಯಾ, ಪತ್ರಗಳು, ಸಂಕೀರ್ಣ, ಮತ್ತು ಅನುಬಂಧ ಭಾಗಗಳನ್ನಾಗಿ ವಿಂಗಡಿಸಲಾಗಿದೆ.
ಲೋಹಿಯಾ ಭಾಗದಲ್ಲಿ ಮುನ್ನುಡಿ, ಜಾತಿಪದ್ಧತಿ, ಭಾಷೆ, ಭಾರತದ ರೈತ, ಸಂಘಟನೆ, ಸತ್ಯಾಗ್ರಹ, ಹೋರಾಟ, ಅಹಿಂಸೆ ಮತ್ತು ಹಿಂಸೆ, ವಿದೇಶಾಂಗ ನೀತಿ, ಪ್ರಸಕ್ತ ನಾಗರಿಕತೆ, ಕಮ್ಯುನಿಸಂ ಎಂದರೇನು?, ಮಾರ್ಕ್ಸ್‌ವಾದ ಎಂದರೇನು?, ಮತ್ತು ಮಾರ್ಕ್ಸ್ ನಂತರದ ಅರ್ಥಶಾಸ್ತ್ರ, ಪ್ರಜ್ಞೆ ಮತ್ತು ಪರಿಸರ, ಮಾರ್ಕ್ಸ್‌ವಾದ ಮತ್ತು ಸಮಾಜವಾದ, ಗಾಂಧಿವಾದ ಮತ್ತು ಸಮಾಜವಾದ ವಿಚಾರಗಳನ್ನು ಇಲ್ಲಿ ಕಾಣಬಹುದಾಗಿದೆ.
ಸಂಕೀರ್ಣ ವಿಭಾಗದಲ್ಲಿ; ನನ್ನ ಸಾಹಿತ್ಯ ರಚನೆಯ ಮೂಲ ಮತ್ತು ಉದ್ದೇಶ, ಸತ್ಯಕಾಮ ಅವರ ಕಾದಂಬರಿಗಳ ಬಗ್ಗೆ ಕೆಲವು ಅನಿಸಿಕೆಗಳು, ಕುದುರೆ ಮುಖ- ಒಂದು ದುರಂತ, ಎಲ್ಲ ತತ್ವದೆಲ್ಲೆ ಮೀರಿ, ನಾಡಗೀತೆಯಲ್ಲಿ ಮಧ್ವುರ ಸೇರ್ಪಡೆ ಚಿತಾವಣೆಗೆ ಬಲಿಯಾದ ಮತಮೂಢ ಶುದ್ರೂರು, ಪ್ರಕೃತಿ ಮತ್ತು ಪರಿಸರ, ಜಗತ್ತಿನ ಎಲ್ಲೆಡೆ ಧಾರ್ಮಿಕ ಮೂಲಭೂತವಾದ ಎನ್ನುವ ವಿಚಾರಗಳು ಇಲ್ಲಿವೆ.
ಅನುಬಂಧ ವಿಭಾಗದಲ್ಲಿ; ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ- ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ಕರಾರು ಪತ್ರ, ವಿಷಯ ಸೂಚಿ ಅನ್ನು ಒಳಗೊಂಡಿದೆ.
©2024 Book Brahma Private Limited.