ಲೇಖಕ ರಾಜಶೇಖರ ಹೆಬ್ಬಾರ ಅವರ `ಬಿ.ಎಚ್ ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-5 ಅನುವಾದ-1’ ಕೃತಿಯು ಬಿ.ಎಚ್. ಶ್ರೀಧರ ಅವರ ಸಾಹಿತ್ಯ ಬದುಕಿನ ಚಿತ್ರಣವಾಗಿದೆ. ಬಿ.ಎಚ್. ಶ್ರೀಧರ ಅವರ, ಪುರಾಣವು ಅವತಾರಗಳನ್ನವಲಂಬಿಸಿರುವುದು ಕರ್ಮ ಸಿದ್ದಾಂತದಂತಹ ಯಾಂತ್ರಿಕ ನಿಸರ್ಗ ನಿಯಮಗಳು ಕ್ರಮವಾಗಿ ಜೀವಿಯನ್ನು ಅನಂತ ನಿರಾಶೆಗಳಿಸ ಹೊರಟಾಗ ಅವನಲ್ಲಿ ಪ್ರತ್ಯಾಶೆಯು ಮೂಡುವಂತೆ ಮಾಡಲೆಂದೇ. ತ್ರಿಕರಣಪೂರ್ವಕವಾಗಿ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಪಾಪವಿಮೋಚನೆ ಮಾಡೆಂದು ಬೇಡಿಕೊಳ್ಳಲು ಸಾಕಾರ ಸಂಕೇತವು ಸಾಮಾನ್ಯನಿಗೆ ಅಗತ್ಯ ಎಂಬ ಮಾತುಗಳಿವೆ. ಆ ಆಕೃತಿ ಸಾವಯವದಾದರೂ ಸರಿಯೆ. ನಿರವಯವಾದರೂ ಸರಿಯೆ. ದೇವರೆಂಬ ದಾಕರಾದಿ ಸಂಕೇತದ ಸತ್ಯತೆಯು, ನಿತ್ಯವೂ, ನಿರ್ವಿಕಲ್ಪವೂ, ನಿರವಧಿಕ, ಸಾಮರ್ಥ್ಯ ಸಂಪನ್ನವೂ, ಸರ್ವಾದಿ ಕಾರಣವೂ ಆಗಿರುವುದೆಂಬ ನಂಬಿಕೆ ಪ್ರಾಂತೀಯವಾಗಿರುವುದರಿಂದ, ಹುಟ್ಟಾ ಇರುವುದರಿಂದ ಅದನ್ನು ಪ್ರತಿಭಟಿಸುವ ಬೌದ್ದಿಕ ಸರ್ಕಸ್ಸು ಶಾಂತಿಮಾರಕವಾಗಿ ಪರಿಣಮಿಸುವುದು ಅನುಭವಸಿದ್ದ. ಆದಿಕಾರಣವು, ಬುದ್ದ್ಯತೀತ. ಆದರೆ ಬುದ್ದೂಹ್ಯ ಅಸ್ತಿತ್ವವುಳ್ಳದ್ದು ಜ್ಞಾನಮಯ ಭಕ್ತಿ ಯಾವಭಕ್ತಿಯ ಜ್ಞಾನ ಮೂಢನಂಬಿಗೆಯಲ್ಲ ಜ್ಞಾನವು ವೈರಾಗ್ಯದಷ್ಟು ವಸ್ತುನಿಷ್ಠ ದೃಷ್ಠಿಯುಳ್ಳದ್ದಾದಾಗ ಮತ್ತು ಭಕ್ತಿಯು ಜಗತ್ಕುಟುಂಬಿಯ ಪ್ರೀತಿಯಷ್ಟು ವಿಸ್ತಾರವೂ, ಪ್ರಾಮಾಣಿಕವೂ ಆದಾಗ’ ಎಂದು ಕೃತಿಯ ಕುರಿತು ಅಭಿಪ್ರಾಯಪಡಲಾಗಿದೆ.
ಲೇಖಕ ರಾಜಶೇಖರ ಹೆಬ್ಬಾರ ಅವರು ಮೂಲತಃ ಉಡುಪಿಯವರು. ಕೃತಿಗಳು: ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-2 ವಿಮರ್ಶೆ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-3 ವಿಚಾರ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-5 ಅನುವಾದ- 1, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-6 ಅನುವಾದ-2 ...
READ MORE