ದೀನ್ ದಯಾಳ್ ಉಪಾಧ್ಯಾಯರು ಅಂಕಣಕಾರರಾಗಿ ಬರೆಯುತ್ತಿದ್ದ ದೆಹಲಿಯ ಆರ್ಗನೈಸರ್ ಪತ್ರಿಕೆಯಲ್ಲಿ ಬರಹಗಳ ಸಂಗ್ರಹವಾಗಿದೆ ಈ ಸಂಪುಟ. ಇಲ್ಲಿನ ಲೇಖನಗಳಲ್ಲಿ ಕೆಲವು ಅಂದಿನ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ, ಪೂರಕವಾಗಿ ಬರೆದವುಗಳಾದರೂ ಪ್ರಸ್ತುತ ಕೂಡ ಕೆಲವು ಉದ್ದೇಶಗಳಿಗೆ ಉಪಯುಕ್ತವಾಗಿವೆ. ಇನ್ನು ಕೆಲವು, ಆಳವಾದ ಚಿಂತನೆಗಳಿಂದ ಕೂಡಿದ, ಭಾರತ ಸರ್ಕಾರದ ಸ್ವರ್ಣನೀತಿ, ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆ, ಫೋರ್ಡ್ ಸಂಸ್ಥೆ ಮತ್ತು ಗೋಹತ್ಯೆ, ರಾಷ್ಟ್ರೀಯತೆ ಮತ್ತು ಮಾನವ ಏಕತೆ ಹೀಗೆ ನಮ್ಮ ಆಲೋಚನೆಗಳಿಗೆ ಆಹಾರವನ್ನೊದಗಿಸುವ ವಿವಿಧ ಲೇಖನಗಗಳನ್ನೊಳಗೊಂಡಿದ್ದು ಇತಿಹಾಸವನ್ನು ತಿಳಿಯ ಬಯಸುವವರಿಗೆ ಸಹಾಯವನ್ನು ಮಾಡುತ್ತವೆ. ಈ ಸಂಪುಟದಲ್ಲಿರುವ ಲೇಖನಗಳಿಗೆ ಅಂದಿನ ವರ್ತಮಾನದ ಸಂಕೋಲೆಯಿಲ್ಲ. ಕೆಲವು ವಿಚಾರಗಳಂತೂ ಇಂದಿನ ನಮ್ಮ ವ್ಯವಸ್ಥೆಗೂ ಅನ್ವಯವಾಗುವಂತಹವುಗಳಾಗಿವೆ.
©2024 Book Brahma Private Limited.