ಲೇಖಕ ರಾಜಶೇಖರ ಹೆಬ್ಬಾರ ಅವರ ’ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ’ ದ ಮೊದಲನೆಯ ಸಂಪುಟವಾದ ಕಾವ್ಯದ ಬಳಿಕ ಎರಡನೇಯ ಸಂಪುಟ ಅವರ ವಿಮರ್ಶಾ ಕೃತಿಗಳನ್ನು ಒಳಗೊಂಡಿದೆ. ಶ್ರೀಧರ ಅವರ ವಿಮರ್ಶಾಕೃತಿಗಳಾದ ಬೇಂದ್ರೆ ಹೊಸಗನ್ನಡ ಸಾಹಿತ್ಯಶೈಲಿ, ರವೀಂದ್ರ, ಕಾವ್ಯಸೂತ್ರ, ಜನ್ನ, ಪ್ರತಿಭೆ ಮತ್ತು ಪಸರಿಪ ಕನ್ನಡಕ್ಕೊಡೆಯನೀಗ ದರಾಂಕಿತ ಬೇಂದ್ರೆ ಎಂಬ ಏಳು ಗ್ರಂಥಗಳನ್ನು ಸಂಕಲಿಸಲಾಗಿದೆ. ಮೊದಲ ಸಂಪುಟದಲ್ಲಿಯಂತೆ ಆಯಾ ಕೃತಿಗಳ ಅಂದಿನ ಮುನ್ನುಡಿಗಳೂ, ಈ ಸಂಪುಟಕ್ಕೆ ಸಂಬಂಧಿಸಿದ ಹೊಸ ಲೇಖನಗಳೂ ಇವೆ. ಶ್ರೀಧರ ಅವರ ಸಾಹಿತ್ಯರಚನೆ ಕಾವ್ಯದಿಂದಲೇ ಆರಂಭವಾದರೂ ಸಮಪ್ರಮಾಣದಲ್ಲಿ ವಿಮರ್ಶಾ ಗ್ರಂಥಗಳೂ ಅವರಿಂದ ರಚಿತವಾಗಿ, ವಿಮರ್ಶೆಯ ಕ್ಷೇತ್ರದಲ್ಲೂ ಅವರ ಹೆಸರು ಜನಜನಿತವಾಗಿದೆ. ಸಂಸ್ಕೃತ, ಕನ್ನಡ, ಇಂಗ್ಲೀಷ್ ಈ ಮೂರೂ ಭಾಷೆಗಳ ಕಾವ್ಯಮೀಮಾಂಸೆಯನ್ನು ಅಭ್ಯಸಿಸಿ ಅರಗಿಸಿಕೊಂಡು ಒಂದು ಖಚಿತ ನಿಲುವಿಗೆ ಬಂದು, ಅದನ್ನು ಸ್ಪಷ್ಟ ಭಾಷೆಯಲ್ಲಿ, ಸಾಧಾರವಾಗಿ, ನಿಖರವಾಗಿ, ನಿರೂಪಿಸಿದ ಅವರ ಮಾಸ್ಟರ್ ಪೀಸ್ ಬಹು- ಬಹುಮಾನಿತ ”ಕಾವ್ಯ ಸೂತ್ರದ ಮರು ಓದು, ಚರ್ಚೆ ಆಗಬೇಕಿದೆ. ಈ ಎಲ್ಲ ಅಂಶಗಳನ್ನು ಈ ಕೃತಿಯು ಹೊಂದಿದ್ದು ಕಾವ್ಯದ ಆದರ್ಶ ಹಾಗೂ ವಿಮರ್ಶೆಯ ಆದರ್ಶ ಈ ಎರಡನ್ನೂ ಇಲ್ಲಿ ಕಾಣಬಹುದು.
ಲೇಖಕ ರಾಜಶೇಖರ ಹೆಬ್ಬಾರ ಅವರು ಮೂಲತಃ ಉಡುಪಿಯವರು. ಕೃತಿಗಳು: ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-2 ವಿಮರ್ಶೆ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-3 ವಿಚಾರ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-5 ಅನುವಾದ- 1, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-6 ಅನುವಾದ-2 ...
READ MORE