ಎಂ. ಅಬ್ದುಲ್ ರೆಹಮಾನ್ ಪಾಷಾರವರು ಕನ್ನಡೇತರರಿಗೆ ಕನ್ನಡ ನುಡಿಯನ್ನು ಕಲಿಸುವ ಪರಿಯನ್ನು ಮತ್ತು ಸೈದ್ಧಾಂತಿಕ ವಿವರಗಳನ್ನು 'ಕನ್ನಡೇತರರಿಗೆ ಕನ್ನಡ ಕಲಿಸುವವರ ಕೈಪಿಡಿ' ಎಂಬ ಈ ಕೃತಿಯಲ್ಲಿ ಅತಿ ಸರಳವಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಪಠ್ಯಕ್ರಮದಲ್ಲಿ ಕನ್ನಡದಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ ಇತ್ಯಾದಿ ವಿಷಯಗಳು (ಪೇಪರ್‌ಗಳು) ಇರುತ್ತವೆ. ಅವು ಸಾಮಾನ್ಯವಾಗಿ ಕನ್ನಡ ಭಾಷೆಯ ಮೂಲಕ ಕನ್ನಡ ಸಾಹಿತ್ಯವನ್ನು ಕಲಿಸುವ ಉದ್ದೇಶವನ್ನು ಹೊಂದಿರುತ್ತವೆ. ಎಂದರೆ, ಕಲಿಕೆಯ ಗುರಿ ಕನ್ನಡ ಸಾಹಿತ್ಯವಾಗಿರುತ್ತದೆ, ಕನ್ನಡ ಭಾಷೆ ಕೇವಲ ಸಾಧನವಾಗಿರುತ್ತದೆ. ಆದರೆ, ಈ ಹೊತ್ತಿಗೆಯಲ್ಲಿ ಪಾಷಾರವರ ಗುರಿ ಇರುವುದು ನೇರವಾಗಿ ಭಾಷೆಯನ್ನೇ, ಅಥವಾ ಭಾಷಾ ಕೌಶಲಗಳನ್ನೇ ಕಲಿಸುವುದರ ಕುರಿತು. ಬಳಕೆಯಾಗಬಹುದಾದ ವಸ್ತು ಭಾಷಾ ಕಲಿಕೆಗೆ ಕೇವಲ ಸಾಧನವಷ್ಟೇ.
ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...
READ MORE