ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು, ಪತ್ರಗಳು, ಭಾಷಣಗಳನ್ನು ಈ ಸಂಪುಟವು ಒಳಗೊಂಡಿದೆ. ಯಾಂತ್ರೀಕರಣವನ್ನು ಹೊರತುಪಡಿಸಿದ ಬೇಸಾಯ ಪದ್ದತಿ ಸುಧಾರಣೆ, ತಾಂತ್ರಿಕ ವಿಜ್ಞಾನ, ಆಹಾರ ಮತ್ತು ರೈತ, ಸರ್ಕಾರದಿಂದ ಕಡೆಗಣನೆಗೆ ಒಳಗಾಗುತ್ತಿರುವ ಕೃಷಿ, ಆರ್ಥಿಕ ವ್ಯವಸ್ಥೆ, ಪಾಶ್ಚಾತ್ಯ ಆದರ್ಶಗಳ ಅಂಧಾನುಕರಣೆಯಿಂದ ರಾಷ್ಟ್ರೀಯತೆ ಮೇಲಾಗುವ ದುಷ್ಪರಿಣಾಮಗಳ ಬಗೆಗಿನ ವಿವರ, ಅಲ್ಲದೆ ರಾಜಕೀಯ ಪಕ್ಷಗಳ ಜವಾಬ್ದಾರಿ, ಮತದಾರ ನಿರ್ವಹಿಸಬೇಕಾದ ಪಾತ್ರ, ರಾಷ್ಟ್ರೀಯತೆಯ ಪರಿಭಾವನೆ, ಭಾರತದ ವಿಭಜನೆ ಈ ಸಂಗತಿಗಳ ಕುರಿತ ಮಾಹಿತಿಗಳನ್ನು ಈ ಸಂಪುಟವು ಒದಗಿಸುತ್ತದೆ.