ಲೇಖಕಿ ಡಾ. ಪ್ರೇಮಲತ ಬಿ. ಅವರ ಅಂಕಣ ಬರಹಗಳ ಕೃತಿ ʻಕೋವಿಡ್ ಡೈರಿʼ. ಮನುಕುಲವನ್ನು ನಾನಾ ರೀತಿಯಲ್ಲಿ ಕಾಡಿದ ಕೊರೋನಾ ಎಂಬ ಮಹಾರೋಗದ ಸಮಗ್ರ ಚರಿತ್ರೆಯನ್ನು ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಕೊರೋನಾ ವೈರಸ್‌ನ್ನು ಕೇವಲ ಒಂದು ರೋಗವಾಗಿ ಮಾತ್ರ ಕಾಣದೆ ಅದು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕಲಿಸಿದ ಬದುಕಿನ ಪಾಠವನ್ನೂ ಇಲ್ಲಿ ಚರ್ಚಿಸಲಾಗಿದೆ. ಲೇಖಕ ನಾ. ಸೋಮೇಶ್ವರ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ತುಮಕೂರು ಮೂಲದ ಪ್ರೇಮಲತ ಬಿ. ಅವರು ದಂತವೈದ್ಯೆ. ಬೆಂಗಳೂರಿನಲ್ಲಿ ಪದವಿ, ಮ್ಯಾಂಚೆಸ್ಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಳೇದ ಹದಿನೈದು ವರ್ಷಗಳಿಂದ ಇಂಗ್ಲಂಡ್ ನಿವಾಸಿ. ಕನ್ನಡ ಓದು, ಬರವಣಿಗೆ ಹಾಗೂ ಸಮರ ಕಲೆಯ ಹವ್ಯಾಸವುಳ್ಳ ಇವರು ಕನ್ನಡ ಲೇಖನಗಳಿಗೆ ಬಹುಮಾನವನ್ನೂ ಪಡೆದವರು. ಕೃತಿ: ತಿರುವುಗಳು, ಐದು ಬೆರಳುಗಳು, ಕೋವಿಡ್ ಡೈರಿ ...
READ MORE