ಡಾ. ಮೂಡ್ನಾಕೂಡು ಸಮಗ್ರ ಸಾಹಿತ್ಯ ಸಂಪುಟ-೪

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 476

₹ 425.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ. ಬೆಂಗಳೂರು
Phone: 08022484516

Synopsys

ಮೂಡ್ನಾಕೂಡು ಚಿನ್ನಸ್ವಾಮಿ ಅವರ ನಾಲ್ಕನೇ ಸಂಪುಟವು ಸಾಹಿತ್ಯ, ಮಾಧ್ಯಮ ಲೋಕ, ಅನ್ಯಜ್ಞಾನ ಶಿಸ್ತುಗಳ ಅನುಭವ ಲೋಕವನ್ನು ತೆರೆದಿಡುತ್ತದೆ. ವ್ಯಕ್ತಿ ಪರಿಚಯದ ಸಂದರ್ಶನ ಲೋಕ ಹಾಗೂ ಸಮಾಜನಿಷ್ಟವಾದ ಬರೆಹಗಳನ್ನು ಒಳಗೊಂಡ ಪುಸ್ತಕವಿದು. ಇಲ್ಲಿ ಬರಹಗಾರನ ವ್ಯಕ್ತಿತ್ವವನ್ನು ನಿಕಷಕ್ಕೊಡ್ಡಿದ ಬರಹಗಳೂ ಆಗಿವೆ. ಪತ್ರಿಕೆಗಳಿಗೆ ಅಂಕಣ ಬರೆಯುವ ಸಂದರ್ಭದಲ್ಲಿ ಬೌದ್ಧಧರ್ಮದ ವಿಚಾರಗಳನ್ನು ಕೇಂದ್ರೀಕರಿಸಿಕೊಂಡರೂ, ವಿಶಾಲ ವ್ಯಾಪ್ತಿಯಲ್ಲಿ ಧರ್ಮದ ನಿರೀಕ್ಷೆಯನ್ನು ಜೀವಪರವಾದ ಚಿಂತನೆಯಾಗಿಸುವತ್ತ ವ್ಯಾಖ್ಯಾನಿಸಿದ್ದ, ಬೌದ್ಧಧರ್ಮದ ಜಾತಕ ಕಥೆಗಳ ಎಷ್ಟೋ ಕಥೆಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಂಡು, ಆತ್ಮ ಸಹಿಷ್ಣುತಾ ಗುಣವನ್ನು ಪ್ರಸ್ತಾಪಿಸಿದ ಅವರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹಲವು ಸಂಪುಟಗಳಲ್ಲಿ ಹೊರತಂದಿದೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books