ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಡಾ. ಬಿ.ಆರ್. ಅಂಬೇಡ್ಕರರು ಬರೆದಿದ್ದ ಪಾಲಿ ಪದಕೋಶವನ್ನು ಡಾ. ಆರ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದು, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಮಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಪಾಲಿ ಪದಕೋಶವು ಒಂದು ಪದಪಟ್ಟಿಯ ರೂಪದ್ದಾಗಿದ್ದು, ಪಾಲಿ ಪದಗಳಿಗೆ ಕನ್ನಡದ ಅರ್ಥವನ್ನು ನೀಡಲಾಗಿದೆ. ಜೊತೆಗೆ ಇಂಗ್ಲಿಷಿಗೆ ಕಟ್ಟುಬೀಳದೆ ಪಾಲಿ ಭಾಷೆಯ ಪದಗಳಿಗೆ ಕನ್ನಡದಲ್ಲಿಯೇ ಪದಗಳನ್ನು ರೂಪಿಸಿಕೊಡಲಾಗಿದೆ. ಪಾಲಿ ಭಾಷೆಯಲ್ಲಿರುವ ಅಗಾಧ ಸಾಹಿತ್ಯವನ್ನು ಓದಲು, ಅರಗಿಸಿಕೊಳ್ಳಲು ಈ ಕೃತಿಯು ಸಹಾಯಕ ಪಠ್ಯವಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕೃತ ಆರ್. ಲಕ್ಷ್ಮೀನಾರಾಯಣ ಅವರು ಹುಟ್ಟಿದ್ದು 1949ರ ಡಿಸೆಂಬರ್ 2ರಂದು ತುಮಕೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿರುವ ಇವರು ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ, ಕೆಲಕಾಲ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರು ಬರೆದಿರುವ ಕೃತಿಗಳೆಂದರೆ; ಮಾಸ್ತಿ, ಆಹ್ಲಾದ, ಎಸ್.ವಿ. ಪರಮೇಶ್ವರ ಭಟ್ಟ-ವಿಮರ್ಶಾ ಕೃತಿಗಳು. ಚಿನ್ನದ ಕಳಶ ಬರ್ಟೋಲ್ಟ್ ಬ್ರೆಕ್ಸ್, ವಾಜಿಯ ವಿವೇಕ, ಇನ್ನೊಬ್ಬ ದ್ರೋಣಾಚಾರ್ಯ, ಅನುರೂಪ ಅನುವಾದಿತ ಕೃತಿಗಳು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ...
READ MORE