‘ನಾಡಿ ಮಿಡಿತ’ ಸಮಗ್ರ ಕಾದಂಬರಿಗಳ ಸಂಪುಟವಾಗಿದ್ದು, ಈ ಕೃತಿಯು ನಾ. ಡಿಸೋಜ ಅವರ ಸಂಪುಟ-2 ಭಾಗವಾಗಿದೆ. ಈ ಕಾದಂಬರಿಗಳ ಪಯಣ ಆರಂಭವಾಗಿದ್ದು 1964ರಲ್ಲಿ. ಇಲ್ಲಿ ಕೆಂಪು ತ್ರಿಕೋನ, ನೆಲೆ, ಮಾನವ, ತಿರುಗೋಡಿನ ರೈತ ಮಕ್ಕಳು, ಇಕ್ಕೇರಿಯಲ್ಲಿ ಕ್ರಾಂತಿ ಕಾದಂಬರಿಗಳನ್ನು ಕಾಣಬಹುದು. ‘ಕೆಂಪು ತ್ರಿಕೋನ’ ಕುಟುಂಬ ಯೋಜನೆಯನ್ನ ಪ್ರತಿನಿಧಿಸುವ ಒಂದು ಸಂಕೇತ. ಇದು ನೌಕರರ ಕತೆ. ಈ ಕಾದಂಬರಿ ಹಲವರ ಗಮನ ಸೆಳೆದಿದೆ. ಇನ್ನು ಜನರ ನಂಬಿಕೆಯನ್ನೇ ಭಾಗವಾಗಿಟ್ಟುಕೊಂಡು ಬರೆದ ಕತೆ ‘ನೆಲೆ’. ಮಾನವ ಶತಮಾನಗಳಿಂದ ಈ ನೆಲದಲ್ಲಿ ಬದುಕಿದ್ದಾನೆ. ಅವನಿಗೊಂದು ಪುರಾಣಯಿದೆ. ಒಂದು ಇತಿಹಾಸವಿದೆ. ಒಂದು ವರ್ತಮಾನದ ಕಾಲ ಕೂಡ ಇದೆ. ಈ ಮೂರು ಕಾಲದಲ್ಲಿ ಅವನು ಹೇಗೆ ಬದುಕಿದ್ದ ಅನ್ನುವುದೇ ‘ಮಾನವ’ ಕಾದಂಬರಿಯ ವ್ಯಾಖ್ಯಾನ. ರೈತರು ನಾವೆಲ್ಲ ನಂಬಿರುವ ಹೊಲ ಗದ್ದೆಗಳಲ್ಲಿ ದುಡಿಯುವವರು. ಆದರೆ ಅವರನ್ನ ಇತರೇ ಕೆಲಸಗಳಿಗೆ ತೊಡಗಿಸಿ ಶೋಷಣೆ ಮಾಡುವುದೂ ನಡೆಯುತ್ತಿರುತ್ತದೆ. ಹೀಗೆ ಒಂದು ಕಾಮಗಾರಿಗೆ ಒಳಗಾಗಿ ಪಾಡು ಪಟ್ಟ ಕತೆ ‘ತಿರುಗೋಡಿನ ರೈತ ಮಕ್ಕಳು’. ಇನ್ನು ಇಕ್ಕೇರಿ ಕ್ರಾಂತಿ ಇಕ್ಕೇರಿ ಸೀಮೆಯ ಬಗ್ಗೆ ಮಾತನಾಡುತ್ತದೆ. ಒಂದು ಕುಟುಂಬ ಕೆಳಹದಿಯಲ್ಲಿ ರಾಜ್ಯ ಕಟ್ಟಿ ಸುಮಾರು 200, 250 ವರ್ಷಗಳ ಕಾಲ ಇಲ್ಲಿ ಸಮರ್ಥವಾಗಿ ರಾಜ್ಯವಾಳಿತು. ಅಲ್ಲಿಯ ಇತಿಹಾಸವನ್ನ ಕೆದಕುವ ಒಂದು ಯತ್ನ ‘ಇಕ್ಕೇರಿಯಲ್ಲಿ ಕ್ರಾಂತಿ’ ಕಾದಂಬರಿ ಮಾಡುತ್ತದೆ.
©2024 Book Brahma Private Limited.