ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾರ್ವಜನಿಕ ಜೀವನದ ಮೊದಲ ಮೂರು ದಶಕಗಳಲ್ಲಿ ಅವರು ಭಾಗವಹಿಸಿದ ಮುಂಬಯಿ ಶಾಸಕಾಂಗ ಸದನದಲ್ಲಿ ಆಯವ್ಯಯ ಪತ್ರಗಳ ಬಗ್ಗೆ, ಮುಂಬಯಿ ವಿಶ್ವವಿದ್ಯಾಲಯಗಳ ಮಸೂದೆಗಳ ಬಗ್ಗೆ, ಅನುವಂಶಿಕ ಹುದ್ದೆಗಳ ಕಾಯಿದೆಗಳ ಬಗ್ಗೆ, ಗ್ರಾಮ ಪಂಚಾಯಿತಿ ಕಾಯಿದೆಗಳ ಕುರಿತ ವಿವರಗಳನ್ನು ಈ ಕೃತಿಯೂ ಒಳಗೊಂಡಿದೆ. ನ್ಯಾಯಾಂಗದ ಸ್ವಾತಂತ್ರ್ಯ, ಪ್ರತ್ಯೇಕ ಕರ್ನಾಟಕ ಪ್ರಾಂತ ರಚನೆಯ ವಿಷಯ, ಔದ್ಯಮಿಕ ವಿವಾದ ಮಸೂದೆ, ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆ, ಪ್ರಾಂತೀಯ ಶಾಸಕಾಂಗ ಹಾಗೂ ಸ್ವಾಯತ್ತತೆ ಅಲ್ಲದೆ ಸಾರ್ವಜನಿಕ ಸೇವೆ ಕುರಿತ ಅಧಿಕೃತ ಮಾಹಿತಿಯನ್ನು ವಿವರಿಸುತ್ತದೆ. ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು 1815ರಲ್ಲಿ ಆರಂಭವಾದ ಬ್ರಿಟಿಷ್ ಆಡಳಿದಲ್ಲಿನ ವಿದ್ಯಾಭ್ಯಾಸದ ಸಮೀಕ್ಷೆ, ಭಾರತೀಯ ಶಾಸನಬದ್ಧ ಆಯೋಗಕ್ಕೆ ನಿಮ್ನ ವರ್ಗದವರ ಹಿತಾಸಕ್ತಿಗಳ ರಕ್ಷಣೆ ಕುರಿತು ಸಲ್ಲಿಸಿದ ವಿವರ, 1930-31ರ ನಡುವೆ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನ ಕಾರ್ಯಕಲಾಪದಲ್ಲಿ ಅವರು ಮಂಡಿಸಿದ ವಾದಗಳು, ಖ್ಯಾತ ಪೂನಾ ಒಪ್ಪಂದದ ಬಗ್ಗೆ ಅವರ ಅಭಿಪ್ರಾಯ, ಮುಂತಾದ ಪ್ರಮುಖ ಅಂಶಗಳ ಕುರಿತ ಮಾಹಿತಿಯು ಈ ಪುಸ್ತಕದಲ್ಲಿ ಲಭ್ಯವಿದೆ.
©2024 Book Brahma Private Limited.