'ನಮ್ಮ ಅನುವಾದಕ' ಕೃತಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ಎರಡು ಭಾಗಗಳಲ್ಲಿ ಲೇಖಕ ಜಯಶೆಟ್ಟಿ ಅವರ ಬದುಕು-ಬರಹಕ್ಕೆ ಸಂಬಂಧಿಸಿದ ಲೇಖನಗಳಿದ್ದರೆ, ಇನ್ನೆರಡು ಭಾಗಗಳಲ್ಲಿ ಒಂದು ಅನುವಾದ ಕಲೆಗೂ ಮತ್ತೊಂದು ಧರ್ಮ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದೆ. ಈ ಕೃತಿಯನ್ನು ಎಂ. ಎಸ್. ಲಠ್ಠೆ ಹಾಗೂ ಗವಿಸಿದ್ಧಪ್ಪ ಎಚ್. ಪಾಟೀಲ ಸಂಪಾದಿಸಿದ್ದಾರೆ.
ಡಾ. ಗವಿಸಿದ್ದಪ್ಪ ಎಚ್.ಪಾಟೀಲ ಅವರು ಚಿಂತಕ. ಕನಕದಾಸರು ಕುರಿತ ಕಾವ್ಯ, ಲೇಖನ ಬರೆದಿದ್ದಾರೆ. ಕನಕದಾಸರ ಕುರಿತ ಸಂವಾದ ಹಾಗೂ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡಿಸಿದ್ದಾರೆ. ಗಡಿಭಾಗದಲ್ಲಿ ಕನಕರ ಸಂದೇಶ ಪ್ರಸಾರ ಮಾಡುತ್ತಿದ್ದಾರೆ. ಕನಕಸಿರಿ, ಕನಕ ಚಿಂತನೆ, ಜೀವ ಯಾವ ಕುಲ, ಕನಕದಾಸರು ಮತ್ತು ಅಂಬೇಡ್ಕರ್ ಮುಂತಾದ ಪುಸ್ತಕಗಳನ್ನು ಹೊರತಂದಿದ್ದಾರೆ. ...
READ MORE