ಲೇಖಕ ಸ. ರಘುನಾಥ ಅವರ ಸಮಗ್ರ ಲೇಖನಗಳ ಕೃತಿ-‘ಗೋಂಗೂರ. ಸ. ರಘುನಾಥ ಸಮಗ್ರ ಸಾಹಿತ್ಯ ಸಂಪುಟ-4ರ ಭಾಗವಾಗಿ ತೆಲುಗು ಸಾಹಿತ್ಯ -ಸಂಸ್ಕೃತಿ ಕುರಿತ ಲೇಖನಗಳನ್ನು ಸಂಕಲಿಸಲಾಗಿದೆ. ಇಲ್ಲಿಯ ಲೇಖನಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಮೊದಲನೆ ಭಾಗವು 34 ಲೇಖನಗಳಿವೆ. ತೆಲುಗು ಸಾಹಿತ್ಯದ ಪ್ರಸಿದ್ಧ ಸಾಹಿತಿಗಳ ಪರಿಚಯಾತ್ಮಕ ಹಾಗೂ ವಿವಿಧ ಸನ್ನಿವೇಶದಲ್ಲಿಯ ಸಂಗತಿಗಳ ಕುರಿತ ಲೇಖನಗಳಿವೆ. ಎರಡನೇ ಭಾಗ-2 ಸಂದರ್ಶನಗಳು ಹಾಗೂ ಭಾಗ-3ರಲ್ಲಿ 10 ಅನುವಾದಿತ ಲೇಖನಗಳಿವೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಅಜಯ್ ವರ್ಮ ಅಲ್ಲೂರಿ ‘ಇಲ್ಲಿರುವ ಬಹುತೇಕ ಲೇಖನಗಳ ಹೂರಣ ಸಾಹಿತ್ಯವೇ ಆಗಿದ್ದರೂ ಸಹ ಅದಕ್ಕೆ ಅಂಟಿಕೊಂಡಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಗ್ಗಲುಗಳು ಒಳನೋಟವಾಗಿ ಕಂಡು ಬರುತ್ತವೆ. ಗೋಂಗೂರ ಎಂಬುದು ಪುಂಡಿಪಲ್ಯ. ತೆಲುಗರಿಗೆ ಗೋಂಗೂರ ಎಂದರೆ ಅದೊಂದು ಬಗೆಯ ಗಾಢ ನಂಟು. ಬಿಡಿಸಲಾಗದ ಬಂಧ. ಆದ್ದರಿಂದಲೇ, ತೆಲಗು ನೆಲದ ಸಾಹಿತ್ಯವನ್ನು ಸಂಸ್ಕೃತಿ-ಸಾಮಾಜಿಕ ಸಂಗತಿಗಳನ್ನು ಎತ್ತಿ ಹಿಡಿಯುವ ಇಲ್ಲಿಯ ಲೇಖನಗಳ ಕಟ್ಟಿಗೆ ರಘುನಾಥರು ‘ಗೋಂಗೂರ’ ಎಂಬ ಹೆಸರು ನೀಡಿದ್ದು ಬಹುಸೂಕ್ತವೆನಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.