ಇಂಗ್ಲಿಷ್‍ನಲ್ಲಿ ಸಾಕಷ್ಟು ಪತ್ತೆದಾರಿ ಕಾದಂಬರಿಗಳು ಪ್ರಕಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಕನ್ನಡದ ಓದುಗರಿಗೆ ಪತ್ತೆದಾರಿ ಪ್ರಕಾರವನ್ನು ಪರಿಚಯಿಸಿದವರು ಎನ್. ನರಸಿಂಹಯ್ಯ. ಹೀಗೆ ಕನ್ನಡದ ಓದುಗರನ್ನು ಪ್ರಭಾವಿಸಿ ಅಪಾರ ಪ್ರಮಾಣದಲ್ಲಿ ಬೆಳೆಸಿರುವುದಕ್ಕೆ ಇದು ಒಂದು ಚಾರಿತ್ರಿಕ ಮಹತ್ವದ ದಾಖಲಾತಿ. ನರಸಿಂಹಯ್ಯನವರ ಭಾಷಾಶೈಲಿ, ಕಥನ ವಿನ್ಯಾಸ, ಲೋಕ ನಿರೀಕ್ಷೆ, ಈ ಅಂಶಗಳನ್ನು ಅವರ ಕಾದಂಬರಿಗಳು ತುಂಬ ಸೂಕ್ಷ್ಮವಾಗಿ ಜನಮೆಚ್ಚುಗೆಗೆ ಪಾತ್ರವಾಗಿ, ಸಾಹಿತ್ಯ ಕ್ಷೇತ್ರದಲ್ಲಿ ದಾಖಲಾದವು- ಅವರ ಪತ್ತೆದಾರಿ ಕಾದಂಬರಿ. ಅವೆಲ್ಲವುಗಳನ್ನು ಸಂಪುಟ 1,2,3 4 ರಲ್ಲಿ ನೀಡಲಾಗಿದೆ. ರೋಮಾಂಚನದೊಂದಿಗೆ ಹೊಸ ಶೈಲಿ, ಕುತೂಹಲಭರಿತ ಕಥಾ ಹಂದರ ಅವರ ಕಾದಂಬರಿಗಳಲ್ಲಿ ಹರಡಿದೆ.
ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ...
READ MORE